BELAGAVI

ಬೆಳಗಾವಿಯಲ್ಲಿ ಖಾಕಿ ಘರ್ಜನೆ: ಮಟಕಾ ಅಡ್ಡೆಗಳ ಮೇಲೆ ದಾಳಿ, ಮೂವರ ಬಂಧನ!

Share

ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರು ಫೀಲ್ಡಿಗಿಳಿದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ಮಾರ್ಕೆಟ್ ಹಾಗೂ ಕಾಕತಿ ಠಾಣೆಯ ಪೊಲೀಸರು ಮಿಂಚಿನ ದಾಳಿ ನಡೆಸಿದ್ದು, ಪ್ರಮುಖ ಆರೋಪಿಗಳನ್ನು ಹಣದ ಸಮೇತ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ದೇಶಪಾಂಡೆ ಗಲ್ಲಿಯಲ್ಲಿ ಸಾರ್ವಜನಿಕರಿಂದ ಮಟಕಾ ಹಣ ಸಂಗ್ರಹಿಸುತ್ತಿದ್ದ ಮಂಜುನಾಥ ಯಲ್ಲಪ್ಪ ತಿಗಡಿಯನ್ನು ಕಾಕತಿ ಪಿಎಸ್‌ಐ ಹುಸೇನಸಾಬ ಕೆರೂರ ಮತ್ತು ತಂಡ ಬಂಧಿಸಿ, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಇನ್ನೊಂದೆಡೆ ಮಣ್ಣೂರಿನ ಡೈಯಟ್ ಕಾಲೇಜ್ ಬಳಿ ಮಟಕಾ ಆಡಿಸುತ್ತಿದ್ದ ಭಜರಂಗ ಅಶೋಕ ಕದಮ ಹಾಗೂ ಅಜಿತ ಮಾರುತಿ ಡೋಣಕರಿ ಎಂಬುವವರನ್ನು ಕಾಕತಿ ಪಿಎಸ್‌ಐ ಮೃತ್ಯುಂಜಯ ಮಠದ ಅವರ ತಂಡ ದಾಳಿ ಮಾಡಿ ಸೆರೆಹಿಡಿದಿದೆ. ಬಂಧಿತರಿಂದ ನಗದು ಹಾಗೂ ಮಟಕಾ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, ಕೆ.ಪಿ. ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕರ್ತವ್ಯದಕ್ಷತೆ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!