BELAGAVI

ಬೆಳಗಾವಿಯ ರಾಕಸಕೊಪ್ಪ ಜಲಾಶಯದಲ್ಲಿ ಆತಂಕಕಾರಿ ಮಟ್ಟಕ್ಕೆ ಇಳಿದ ನೀರು

Share

ಬೆಳಗಾವಿ ನಗರದ ದಾಹ ತಣಿಸುವ ಪ್ರಮುಖ ನೀರಿನ ಮೂಲವಾದ ರಾಕಸಕೊಪ್ಪ ಜಲಾಶಯದಲ್ಲಿ ಏಪ್ರಿಲ್ ಆರಂಭದಲ್ಲೇ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ತೀವ್ರಗೊಳ್ಳುತ್ತಿರುವ ಬೇಸಿಗೆಯ ಬಿಸಿಲಿನಿಂದಾಗಿ ಜಲಾಶಯ ಬತ್ತುತ್ತಿದ್ದು, ಮುಂಬರುವ ದಿನಗಳಲ್ಲಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಜನರಲ್ಲಿ ಮನೆಮಾಡಿದೆ.

ಏಪ್ರಿಲ್ ತಿಂಗಳ ಆರಂಭದಲ್ಲಿಯೇ ಬೆಳಗಾವಿ ನಗರದ ಜೀವನಾಡಿ ರಾಕಸಕೊಪ್ಪ ಜಲಾಶಯದ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಇಳಿಕೆಯಾಗಿದೆ. ಬೇಸಿಗೆಯ ತೀವ್ರತೆಯಿಂದಾಗಿ ಜಲಾಶಯದ ಒಳಹರಿವು ಸ್ಥಗಿತಗೊಂಡಿದ್ದು, ಪ್ರಸ್ತುತ ಇರುವ ಅಲ್ಪ ಪ್ರಮಾಣದ ನೀರು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಜಲಾಶಯವು ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಹಾಗೂ ನೀರು ಸರಬರಾಜು ಮಂಡಳಿಗೆ ಈಗಿನಿಂದಲೇ ಸಮರ್ಪಕ ನೀರು ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಗರಕ್ಕೆ ಕುಡಿಯುವ ನೀರು ಪೂರೈಸುವ ಈ ಪ್ರಮುಖ ಮೂಲ ಬರಿದಾಗುತ್ತಿರುವುದು ಜನರಲ್ಲಿ ಆತಂಕ ಒಂದು ವೇಳೆ ಮಳೆ ವಿಳಂಬವಾದರೆ ಬೆಳಗಾವಿ ನಗರವು ತೀವ್ರ ಜಲಕ್ಷಾಮ ಎದುರಿಸುವ ಸಾಧ್ಯತೆ ಎದುರಾಗಿದೆ.

Tags:

error: Content is protected !!