ಲಕ್ಷಾಂತರ ಮಹಿಳೆಯರ ಬದುಕಿಗೆ ಬೆಳಕಾದ ಜ್ಞಾನವಿಕಾಸದ ರೂವಾರಿ, ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಖಾನಾಪುರದಲ್ಲಿ ಅರ್ಥಪೂರ್ಣ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ
ಶ್ರೀ ಕ್ಷೇತ್ರ ಧರ್ಮಸ್ಥಳದ ಚೈತನ್ಯ ಶಕ್ತಿ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ, ಖಾನಾಪುರ ತಾಲ್ಲೂಕಿನ ವಿವಿಧೆಡೆ ಮಾಶಾಸನ ಪಡೆಯುತ್ತಿರುವ ಅಸಹಾಯಕ ಫಲಾನುಭವಿಗಳಿಗೆ ಹಣ್ಣು-ಹಂಪಲ ಹಾಗೂ ಪ್ರಸಾದ ವಿತರಿಸಲಾಯಿತು. ತಾಲ್ಲೂಕಾ ಯೋಜನಾಧಿಕಾರಿ ಗಣಪತಿ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅವರ ಮನೆಬಾಗಿಲಿಗೇ ತೆರಳಿ ಪ್ರಸಾದ ತಲುಪಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಂದಗಡ ವಲಯದ ಮೇಲ್ವಿಚಾರಕ ಮಹಾಂತೇಶ ಡೋಳ್ಳಿಕೊಪ್ಪ ಹಾಗೂ ಯೋಜನೆಯ ಇತರ ಮೇಲ್ವಿಚಾರಕರು ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣದ ಸ್ಫೂರ್ತಿಯಾಗಿರುವ ಅಮ್ಮನವರ ಹುಟ್ಟುಹಬ್ಬವನ್ನು ಇಂತಹ ಮಾನವೀಯ ಕಾರ್ಯದ ಮೂಲಕ ಆಚರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

