BELAGAVI

ಬೆಳಗಾವಿಯ ಜಯನಗರದ ದಕ್ಷಿಣಮುಖಿ ಹನುಮಾನ್ ಮಂದಿರದಲ್ಲಿ ಹನುಮಾನ ಜಯಂತಿ ಸಂಭ್ರಮ

Share

ಇನ್ನು ಅದೇರೀತಿ ಬೆಳಗಾವಿಯ ಜಯನಗರದ ದಕ್ಷಿಣಮುಖಿ ಹನುಮಾನ್ ಮಂದಿರದಲ್ಲಿಯೂ ಹನುಮಾನ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಆಂಜನೇಯನ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾ ಆರತಿ ನೆರವೇರಿಸಲಾಯಿತು. ನಂತರ ಸುಮಂಗಲಿಯರಿಂದ ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ಹನುಮಾನ ಜನ್ಮೋತ್ಸವವನ್ನು ಆಚರಿಸಲಾಯಿತು.


ಈ ಬಾರಿ ತಿರುಪತಿ ಬಾಲಾಜಿ ಮಂದಿರದ ಮಾದರಿಯಲ್ಲಿ ಅಲಂಕಾರವನ್ನು ಮಾಡಲಾಗಿದೆ. ಪ್ರತಿವರ್ಷ ಸುಮಾರು ೪-೫ ಸಾವಿರ ಭಕ್ತರು ಶ್ರೀ ಆಂಜನೇಯನ ದರ್ಶನ ಪಡೆದು ಮಹಾಪ್ರಸಾದವನ್ನು ಸ್ವೀಕರಿಸುತ್ತಾರೆ.

Tags:

error: Content is protected !!