Dharwad

ಏ.3ರಂದು ಧಾರವಾಡ ರಂಗಾಯಣ ಭವನದಲ್ಲಿ ಸ್ವರ ಸಂವಾದಿನಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜನೇ.

Share

ನಾಳೆ ಏಪ್ರಿಲ್ 3ರಂದು ಧಾರವಾಡದ ರಂಗಾಯಣ ಸಮುಚ್ಚಯ ಭವನದಲ್ಲಿ ಸ್ವರ ಸಂವಾದಿನಿ ಸಾಂಸ್ಕೃತಿಕ ಸಂಸ್ಥೆ ಉದ್ಘಾಟನೆ ಹಾಗೂ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ 4ಗಂಟೆಗೆ ಸ್ವರ ಸಂವಾದಿನಿ ಸಾಂಸ್ಕೃತಿಕ ಸಂಸ್ಥೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಯಾದಗಿರಿಯ ಜಿಲ್ಲೆಯ ವಯೋಲಿನ್ ಗಾಯಕರಾದ ಡಾ.ಗುರುಬಸವ ಮಾಹಾಮನೆ, ಧಾರವಾಡದ ಗಾಯಕರಾದ ಡಾ.ಶರಣಬಸಪ್ಪ‌ ಮೇಡೆದಾರ ಅವರಿಗೆ ಗೌರವ ಪ್ರಶಸ್ತಿ ಪ್ರಧಾನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಂಸ್ಥೆಯ ಉದ್ಘಾಟಕರಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ‌ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿಯವರು ಮಾಡಲಿದ್ದಾರೆ. ಜತೆಗೆ ಅನೇಕ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ಸ್ವರ ಸಂವಾದಿನಿ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ‌.‌

Tags:

error: Content is protected !!