Vijaypura

ಮಲಗಿದ್ದ ವ್ಯಕ್ತಿಯ ಮೇಲೆ ಬಟ್ಟೆಯಲ್ಲಿ ಕಲ್ಲು ಕಟ್ಟಿ ಹಲ್ಲೆ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share

ಮಲಗಿದ್ದ ವ್ಯಕ್ತಿಯ ಮೇಲೆ ಅಪರಿತನೊಬ್ಬ ಬಟ್ಟೆಯಲ್ಲಿ ಕಲ್ಲು ಕಟ್ಟಿ ಹಲ್ಲೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ‌. ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಅಂಗಡಿಯ ಮುಂದೆ ಮಲಗಿದ್ದ ಮಾದೇಶ್ ಇಟಗಿ ಮೇಲೆ ಅಪರಿಚಿತ ಯುವಕ ಹಲ್ಲೆ ನಡೆಸಿದ್ದಾರೆ‌. ಹಲ್ಲೆಯ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಟವಲ್ ನಲ್ಲಿ ಕಲ್ಲು ಇಟ್ಟುಕೊಂಡ ಬಂದ ಯುವಕ ಮಲಗಿದ್ದ ಮಾದೇಶ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಪರಿಣಾಮ ಮುಖದ ಮೇಲೆ ಗಂಭೀರ ಗಾಯಗಳಾಗಿವೆ. ಮಾದೇಶನನ್ನ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿರೋ ಬಸವನ ಬಾಗೇವಾಡಿ ಪೊಲೀಸರು ಹಲ್ಲೆ ನಡೆಸಿದ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕುಡಿದ ನಶೆಯಲ್ಲಿ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ..

Tags:

error: Content is protected !!