Dharwad

ದಾವಣಗೆರೆ ಉಪ ಚುನಾವಣೆಯ ಕುರಿತು ಅಲ್ಪ‌ಸಂಖ್ಯಾತರ ಮನವೊಲಿಕೆ ನಾಯಕರು ಮಾಡುತ್ತಿದ್ದಾರೆ- ಲಾಡ್

Share

ದಾವಣಗೆರೆ ಉಪ ಚುನಾವಣೆಯ ಕುರಿತು ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಕೇಳಿದರು. ಆದರೆ ಈಗ ಟಿಕೆಟ್ ಸಮರ್ಥ ಅವರಿಗೆ ನೀಡಲಾಗಿದೆ. ಇದರಿಂದ ಮುಸ್ಲಿಂ ಸಮುದಾಯ ಅಸಮಾಧಾನ ಸಹಜ, ಇದನ್ನು ನಮ್ಮ ನಾಯಕರು ಶಮನ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಸಮುದಾಯದವರು ಅಸಮಾಧಾನ ಇರೋದು ಸಹಜ. ಈಗಾಗಲೇ ರಾಜ್ಯ ನಾಯಕರು ಮನವೊಲಿಸುತ್ತಿದ್ದಾರೆ. ನಾಮಪತ್ರವನ್ನು ವಾಪಸ್ ತೆಗೆಸಿದ್ದಾರೆ. ಇವತ್ತಿಂದ ನಾನು ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಸಾರ್ವಜನಿಕರಲ್ಲಿ ಇಂತಹ ವಿಷಯ ಬಂದಾಗ ಹೈಕಮಾಂಡ್ ಸರಿಪಡಿಸುತ್ತದೆ ಎಂದರು.

Tags:

error: Content is protected !!