ಕಳೆದ ಮಾರ್ಚ್ 22 ರಂದು ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಬಳಿ ನಡೆದಿದ್ದ ಎರಡು ಗುಂಪುಗಳ ನಡುವಿನ ಸಂಘರ್ಷವು ಓರ್ವ ಯುವಕನನ್ನು ಬಲಿ ಪಡೆದಿದೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಯುವಕ 9ದಿನದಿಂದ ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದನ್ನು, ಆದರೆ ಈಗ ಯುವಕ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ.
ಧಾರವಾಡ ಮೂಲದ ಸೈಬಾಜ್ ಮೃತ ಯುವಕನಾಗಿದ್ದಾನೆ. ಸೈಬಾಜ್ ಹಾಗೂ ಆಶ್ಪಾಕ್ ಇಬ್ಬರು ತಮ್ಮ ಸ್ನೇಹಿತರೊಂದಿಗೆ, ಚಿಕ್ಕಮಲ್ಲಿಗವಾಡ ಬಳಿಯ ರೆಸಾರ್ಟನಲ್ಲಿ ಸ್ವಿಮಿಂಗ ಹೋಗಿದ್ದರು. ಈ ವೇಳೆ ಅಲ್ಲೊಂದು ಚಿಕ್ಕ ಗಲಾಟೆ ನಡೆದಿತ್ತು. ಈ ಗಲಾಟೆಯನ್ನು ಸ್ಥಳೀಯರು ಬುಡಿಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಸೈಬಾಜ್, ಆಶ್ಪಾಕ್ ತಮ್ಮ ಸ್ನೇಹಿತರೊಂದಿಗೆ ಮನೆಗೆ ಮರುಳುವ ಚಿಕ್ಕಮಲ್ಲಿಗವಾಡ ರಸ್ತೆಯಲ್ಲಿ ಇನ್ನೊಂದು ಗಿಂಪು ಬೈಕ ತಡೆದು ಮರ ತುಂಡು ತಂದು ಏಕಾಏಕಿ ಹಲ್ಲೆ ಮಾಡಿತ್ತು. ಈ ಘಟನೆಯಲ್ಲಿ ಸೈಬಾಜ್ ಗಂಭೀರವಾಗಿ ಗಾಯಗೊಂಡಿದ್ದನ್ನು. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಗೆ ದಾಖಲಿಸಿ ಕೋಮಾದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಿಸದೇ ಈಗ ಸೈಬಾಜ್ ಕೊನೆಯುಸಿರುಳೆದಿದ್ದಾನೆ. ಮಾರಣಾಂತಿಕ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇನ್ನೂ ಹಲ್ಲೆ ನಡೆಸಿದ ಉಳವಪ್ಪ ಧಾರವಾಡ, ರಾಜು ಕೋರಿ, ಶಿವಪ್ಪ ಕಲ್ಲೂರ, ನಿಂಗಪ್ಪ ನಡುವಿನಮನಿ, ಮುದುಕಪ್ಪ ಕಡೇಮನಿ ಎಂದು ಗುರುತಿಸಲಾಗಿದ್ದು, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
