ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್ ನಾಕಾ ಬಳಿ ನಿನ್ನೆ ಮದ್ಯಾಹ್ನ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಭಾರೀ ದುರಂತ ಸಂಭವಿಸಿತ್ತು. ಇದು ಆಕಸ್ಮಿಕ ಅಪಘಾತವಾಗಿ ಕಂಡುಬಂದಿತ್ತು. ಆದರೆ ಇದೀಗ ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ ಅಪಘಾತದಲ್ಲಿ ಸಜೀವದಹನವಾಗುವ ಮುನ್ನವೇ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಕಂಡುಬಂದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಈ ಭಾರೀ ದುರಂತದ ಹಿಂದೆ ಪ್ರೇಮ್ ಕಹಾನಿ ಇರುವುದು ಬೆಳಕಿಗೆ ಬಂದಿದೆ. ಬಸ್ಗೆ ಬೈಕ್ ಡಿಕ್ಕಿಯಾದ ಕಾರಣ ಸವಾರ ಸಜೀವದಹನವಾಗಿದ್ದ. ಆದರೆ ಇದೀಗ ಆತನ ಸಾವಿನ ಕೇಸ್ಗೆ ಟ್ವಿಸ್ಟ್ ಎದುರಾಗಿದೆ. ಇದು ಆಕಸ್ಮಿಕ ಅಪಘಾತವಲ್ಲ ಎಂದು ತಿಳಿದುಬಂದಿದೆ. ಹೌದು, ವಿಜಯಪುರದಲ್ಲಿ ಪ್ರೀತಿ ವೈಫಲ್ಯದ ಹಿನ್ನೆಲೆಯಲ್ಲಿ ಈ ಯುವಕ ಆತ್ಮಹತ್ಯೆಗೆ ಮಾಡಿಕೊಳ್ಳಲು ಮುಂದಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ಗೆ ಬೈಕ್ನಿಂದ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಬೈಕ್ ಸವಾರ ಯುವಕ ಸಜೀವ ದಹನಗೊಂಡು ಸಾವನ್ನಪ್ಪಿದ್ದಾನೆ. ಮೃತ ಯುವಕನ ಹೆಸರು ಅಭಿಷೇಕ್ ನಾಗರಾಳ್. ಇಂದು ಬೆಳಗ್ಗೆ ಅಭಿಷೇಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ ‘ಇಂದು ನಾನು ಸಾಯುತ್ತೇನೆ. ಅವಳು ನನಗೆ ಬೇಕು. ಅವಳನ್ನು ದೂರ ಮಾಡಿದವರೇ ನನ್ನ ಸಾವಿಗೆ ಕಾರಣ’ ಎಂದು ಹೇಳಿದ್ದಾನೆ.

ಇನ್ನೂ ಆ ಯುವಕ ಮೂವರು ವ್ಯಕ್ತಿಗಳನ್ನು ನೇರವಾಗಿ ಹೆಸರಿಸಿದ್ದಾರೆ. ವೀರೇಶ್ ನಂದೂರ್, ಅವರ ತಾಯಿ ಚೈತ್ರಾ ನಂದೂರ್ ಮತ್ತು ಅವರ ಸಂಬಂಧಿ ನವೀನ್ ಕುಮಾರ್ ಪಾಟೀಲ್. ‘ಈ ಮೂವರು ನನ್ನ ಸಾವಿಗೆ ಕಾರಣ’ ಎಂದು ಅಭಿಷೇಕ್ ಸ್ಪಷ್ಟವಾಗಿ ಹೇಳಿದ್ದಾನೆ. ಈ ಪೋಸ್ಟ್ ಮಾಡಿದ ಕೆಲವು ಗಂಟೆಗಳ ನಂತರ ಅಭಿಷೇಕ್ ಬೈಕ್ನಲ್ಲಿ ಚಲಿಸುತ್ತಾ ವಿಜಯಪುರದ ರಸ್ತೆಯಲ್ಲಿ ಬರುತ್ತಿದ್ದ ಸರ್ಕಾರಿ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ತಕ್ಷಣವೇ ಬೆಂಕಿಗೆ ಆಹುತಿಯಾಗಿದೆ. ಬೈಕ್ ಸವಾರ ಅಭಿಷೇಕ್ ಬೆಂಕಿಯಿಂದ ಹೊರಬರಲು ಸಾಧ್ಯವಾಗದೆ ಸಜೀವ ದಹನಗೊಂಡು ಸಾವನ್ನಪ್ಪಿದ್ದಾನೆ. ಬಸ್ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ತಕ್ಷಣವೇ ಬಸ್ನಿಂದ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಬಸ್ಗೂ ಸ್ವಲ್ಪ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಇನ್ನೂ ಈ ಘಟನೆ ಹಿನ್ನೆಲೆಯಲ್ಲಿ ಪ್ರೀತಿ ವೈಫಲ್ಯದ ಶಂಕೆ ಹೆಚ್ಚಾಗಿದೆ. ಅಭಿಷೇಕ್ ತಮ್ಮ ವಿಡಿಯೋ ಪೋಸ್ಟ್ನಲ್ಲಿ ಪ್ರೀತಿಸಿದ ಹುಡುಗಿಯನ್ನು ದೂರ ಮಾಡಿದವರೇ ತನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾನೆ. ಇದು ಪ್ರೀತಿ ವೈಫಲ್ಯದಿಂದ ಉಂಟಾದ ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ವಿಜಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಭಿಷೇಕ್ ಅವರ ಇನ್ಸ್ಟಾಗ್ರಾಂ ಪೋಸ್ಟ್ ಮತ್ತು ವಿಡಿಯೋವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಬಸ್ ಚಾಲಕ ಮತ್ತು ಇತರರನ್ನು ವಿಚಾರಿಸಲಾಗಿದೆ.
ಒಟ್ಟಾರೆ ಈ ದುರಂತ ಯುವಕರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಪ್ರೀತಿ ವೈಫಲ್ಯದಂತಹ ಸಣ್ಣ ಸಮಸ್ಯೆಗಳಿಗೆ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳು ಸರಿಯಲ್ಲ ಎಂದು ಸಮಾಜದಲ್ಲಿ ಚರ್ಚೆ ನಡೆಯುತ್ತಿದೆ. ವಿಜಯಪುರ ಪೊಲೀಸರು ಘಟನೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಅಭಿಷೇಕ್ ಇನ್ಸ್ಟಾಗ್ರಾಂ ಪೋಸ್ಟ್ ಮತ್ತು ವಿಡಿಯೋವನ್ನು ಪೊಲೀಸರು ಪುರಾವೆಯಾಗಿ ಸಂಗ್ರಹಿಸಿದ್ದಾರೆ. ಪೊಲೀಸರ ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ.
