• ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವು-ಬದುಕಿನ ಹೋರಾಟ
ಇರಾನ್ ಇಸ್ರೇಲ್ ಯುದ್ಧ ಹಿನ್ನಲೆ ಭಾರತ ದೇಶದಲ್ಲಿ
ಅನೇಕ ಅವಶ್ಯಕತೆಗಳ ಅಭಾವ ಶೃಷ್ಠಿಯಾಗಿದ್ದು ಈ ಅಭವತೆಗೆ ಓರ್ವ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರುವಂತೆಯಾಗಿದೆ.ಅರೇ ಯುದಕ್ಕೂ ಅದಕ್ಕೂ ಏನು ಸಂಬಂಧ ಅಂತೀರಾ ಅದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ…
ಪೆಟ್ರೋಲ್ ಅಭಾವ ಶಂಕೆ ಹಿನ್ನಲೆ ಮನೆಯಲ್ಲಿ ಸಂಗ್ರಹಿಸಿದ ಪೆಟ್ರೋಲ್ ಗೆ ತಗುಲಿದೆ ಬೆಂಕಿ. ಮಹಿಳೆಗೆ 95 ℅ ಸುಟ್ಟ ಗಾಯ.
ಧಾರವಾಡ ತಡಕೊಡ ಗ್ರಾಮದಲ್ಲಿ ತಡ ರಾತ್ರಿ ಹೊತ್ತಿ ಉರಿದ ಮನೆ, ಬೆಚ್ಚಿಬಿದ್ದ ಗ್ರಾಮಸ್ಥರು.
ಚಿಂತಾಜನಕ ಸ್ಥಿತಿಯಲ್ಲಿ ಮಹಿಳೆ , ಕಿಮ್ಸ್ ಆಸ್ಪತ್ರೆಗೆ ದಾಖಲು.
ಒಂದು ಕಡೆ ಹೊತ್ತಿ ಉರಿಯುತ್ತಿರುವ ಮನೆ . ಇನ್ನೊಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಿಸಿ ಸುಟ್ಟು ಗಾಯದಲ್ಲಿ ಇರುವ ಮಹಿಳೆ ಮೈದುನ. ಈ ಎಲ್ಲ ಘಟನೆಗೆ . ಕಳೆದ ಸೋಮವಾರ ರಾತ್ರಿ ಧಾರವಾಡ ತಾಲೂಕಿನ ತಡಕೊಡ ಗ್ರಾಮ ಸಾಕ್ಷಿಯಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿ ಅಡುಗೆ ಮಾಡುವ ವೇಳೆ ಅಲ್ಲಿಯೇ ಸಂಗ್ರಹಿಸಿ ಇಟ್ಟಿದ ಪೆಟ್ರೋಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣ ಹೊತ್ತಿ ಉರಿದಿದ್ದು. ಮಹಿಳೆಗೆ ಬೆಂಕಿ ತಗಲಿ 95% ಸುಟ್ಟಿದ್ದು ಗಾಯಗೊಂಡ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು. ಮಹಿಳೆಯನ್ನು ಕಾಪಾಡಲು ಹೋದ ಮೈದುನ ಕೈಗೂ ಸಹ ಗಾಯವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದುತ್ತಿದ್ದು. ಅದೃಷ್ಟವಶ ಗಾಯಗೊಂಡ ಮಹಿಳೆ ಮೂವರು ಮಕ್ಕಳು ಮನೆ ಹೊರಗೆ ಆಟ ಆಡುತ್ತಿದ್ದರಿಂದ ಮೂವರು ಮಕ್ಕಳು ಪಾರಾಗಿದ್ದಾರೆ.
ನಾವು ಮನೆಯಲ್ಲಿ ಪೆಟ್ರೋಲ್ ಅಭಾವ ಆಗುತ್ತೆ ಎಂದು ಪೆಟ್ರೋಲ್ ಸಂಗ್ರಹ ಮಾಡಿಲ್ಲ ಎಂದು ಘಟನೆಯಲ್ಲಿ ಗಾಯಗೊಂಡ ಮಹಿಳೆ ಸಂಬಂಧಿ ಯಲ್ಲಪ್ಪ ಹೇಳುತ್ತಿದ್ದು. ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು. ಈ ಕುರಿತು ಈವರೆಗೂ ದೂರು ಹಾಗೂ ಪ್ರಕರಣ ದಾಖಲು ಆಗಿಲ್ಲ. ಇದೀಗ ಘಟನೆಗೆ ಕಾರಣ ಮನೆಯಲ್ಲಿದ್ದ ಸಂಗ್ರಹಿಸಿದ ಪೆಟ್ರೋಲ್ ಕಾರಣ ಅಥವಾ ಸಿಲಿಂಡರ್ ಕಾರಣ ಎಂಬುದು ಇದೀಗ ಪೊಲೀಸ್ ತನಿಖೆ ಮೂಲಕವೇ ತಿಳಿದು ಬರಬೇಕಾಗಿದೆ.
ಒಟ್ಟಾರೆಯಾಗಿ ಮೂರು ದೇಶಗಳ ನಡುವಿನ ಯುದ್ಧ ಹಲವು ದೇಶಗಳಲ್ಲಿ ಅನೇಕ ಅವಾಂತರ ಶೃಷ್ಠಿ ಮಾಡಿದ್ದು. ಈಗ ದೇಶದ ಬಡ ಕುಟುಂಬಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬಿರಿದೆ. ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಡಿಸೇಲ್ ಅಭಾವ ವದಂತಿಗೆ ಓರ್ವ ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನೋರ್ವ ಸದಸ್ಯನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲುವಂತೆ ಮಾಡಿದ್ದು. ಪೊಲೀಸ್ ತನಿಖೆ ನಂತರ ಘಟನೆಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ.
