Belagavi

ಗಾಂಜಾ ಸೇವಿಸಿದ್ದ ಯುವಕನ ಬಂಧನ – ಮಾರ್ಕೆಟ್ ಪೊಲೀಸರಿಂದ ಕ್ರಮ

Share

• ಗಾಂಜಾ ಸೇವಿಸಿದ್ದ ಯುವಕ ಪೊಲೀಸರ ವಶಕ್ಕೆ
• ಶಿವಾಜಿ ನಗರದಲ್ಲಿ ಮಾರ್ಕೆಟ್ ಪೊಲೀಸರ ಕ್ರಮ
• ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢ
• ಮಾದಕ ವ್ಯಸನಿಗಳ ವಿರುದ್ಧ ಪೊಲೀಸ್ ಗದಾಪ್ರಹಾರ

ಬೆಳಗಾವಿ ನಗರದಲ್ಲಿ ಮಾದಕ ವ್ಯಸನಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಯುವಕನನ್ನ ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಳಗಾವಿಯ ನಗರದ ಛತ್ರಪತಿ ಶಿವಾಜಿ ನಗರದ 2ನೇ ಕ್ರಾಸ್ ಬಳಿ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಶಿವಾಜಿ ನಗರದ ನಿವಾಸಿ ಸಿದ್ದಾರ್ಥ ದತ್ತಾ ಕದಮ್ (23) ಎಂದು ಗುರುತಿಸಲಾಗಿದೆ. ಕರ್ತವ್ಯದ ಮೇಲಿದ್ದ ಪೊಲೀಸರಿಗೆ ಈತನ ವರ್ತನೆ ಸಂಶಯಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣವೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವುದು ಕಂಡುಬಂದಿದ್ದರಿಂದ ಹೆಚ್ಚಿನ ತಪಾಸಣೆ ನಡೆಸಲಾಗಿದೆ.
ಆರೋಪಿಯನ್ನು ನಗರದ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ ಗಾಂಜಾ ಸೇವಿಸಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಸಮಯಪ್ರಜ್ಞೆ ಮೆರೆದು ಆರೋಪಿಯನ್ನು ಪತ್ತೆಹಚ್ಚಿದ ಹೆಡ್ ಕಾನ್ಸ್‌ಟೇಬಲ್‌ಗಳಾದ ವಿಶ್ವನಾಥ ಮಾಳಗಿ ಮತ್ತು ಶಂಕರ ಕುಗಳೊಳ್ ಅವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Tags:

error: Content is protected !!