ಖಾನಾಪೂರ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ವಿಠ್ಠಲ ಹಿಂಡಲಕರ ಅವರು ಖಾನಾಪೂರ ತಾಲೂಕಿನ ರಕ್ಷಣಾ ವೇದಿಕೆಯ ಮೂಲಕ ಕನ್ನಡ ನಾಡು ನುಡಿ ನೆಲ ಭಾಷೆಗೆ ಗಡಿ ಭಾಗದಲ್ಲಿ ಕನ್ನಡತನವನ್ನು ಎತ್ತಿ ಹಿಡಿದು ಕನ್ನಡ ಭಾಷೆಗೆ,ಭಾಷೀಕರಿಗೆ ಅನ್ಯಾಯವಾಗಿದೆ ಎಂದು ತಿಳಿದು ತಕ್ಷಣವೇ ತನ್ನ ಹೋರಾಟಕ್ಕೆ ಸೈ ಎನಿಸಿಕೊಳ್ಳುವ ವಿಠ್ಠಲ ಹಿಂಡಲಕರ ಅವರು ಕವಿತೆ ರಚಿಸಿ ಇದರಲ್ಲೂ ಸೈ ಎನಿಸಿಕೊಂಡಿದ್ದಾರೆ ಅವರು ರಚಿಸಿದ ಸೀತಾ ಸ್ವಯಂವರ ಚಂದ್ರು ನಡೆದಿತ್ತು ಸೀತೆಯ ಸ್ವಯಂವರ ಭಾಗವಹಿಸಿದ್ದ ದಶರಥ ಕುಮಾರ ರಾಮನಿಂದ ಶಿವಧನಸ್ಸು ಹರೋಹರ ಸೀತೆ ರಾಮನಿಗೆ ಹಾಕಿದಳು ಪುಷ್ಪಹಾರ ಎಂಬ ಕವಿತೆ ಬಹಳ ಮೆಚ್ಚುಗೆ ಪಾತ್ರವಾಗಿದೆ ಗಡಿ ಭಾಗದ ಖಾನಾಪೂರ ತಾಲೂಕಿನಲ್ಲಿ ಕನ್ನಡ ಕಟ್ಟುವ ಕಾರ್ಯದ ಜೋತೆಗೆ ಕವಿತೆಗಳು ರಚನೆ ಮಾಡಿ ಕನ್ನಡವನ್ನು ಎತ್ತಿ ಹಿಡಿಯುವ ಕಾರ್ಯ ನಡೆದಿದ್ದು ಇಂತಹಾ ಕನ್ನಡ ತಾಯಿಯ ಮಗ ವಿಠ್ಠಲ ಹಿಂಡಲಕರ ಅವರಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
