Dharwad

ಧಾರವಾಡದಲ್ಲಿ ಜಿಮ್ ಟ್ರೇನರ್‌ನಿಂದ ಮಹಿಳೆಯರೊಂದಿಗೆ ದುರ್ವತನೆ; ಬಜರಂಗದಳ ಕಾರ್ಯಕರ್ತರಿಂದ ಜೀಮ್‌ಗೆ ಬೀಗ; ಆಕ್ರೋಶ

Share

• ಫಿಟ್ನೆಸ್ ಫಸ್ಟ್ ಜಿಮ್ ಮೇಲೆ ಬಜರಂಗದಳ ದಾಳಿ
• ಮಹಿಳೆಯರೊಂದಿಗೆ ಟ್ರೈನರ್ ಸಾಬೀರ್ ದುರ್ವರ್ತನೆ ಆರೋಪ
• ಅಸಭ್ಯ ಚಿತ್ರ ಬಿಡಿಸಿ ವಿಕೃತಿ ಮೆರೆದ ಟ್ರೈನರ್
• ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ, ಪರಿಶೀಲನೆ

ಫಿಟ್ನೆಸ್ ಮೆಂಟೇನ್‌ಗೆ ಜಿಮ್‌ಗೆ ಬರುತ್ತಿದ್ದ ಮಹಿಳೆಯರೊಂದಿಗೆ ಜಿಮ್ ತರಬೇತಿದಾರನೊಬ್ಬ ದುರ್ವತನೆ ತೋರುವುದಲ್ಲದೆ, ಆ ಮಹಿಳೆಯರ ಚಿತ್ರ ಬಿಡಿಸಿ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾನೆಂದು ಆರೋಪಿಸಿ ಬಜರಂಗದಳ ಸೇರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜೀಮ್‌ಗೆ ಬೀಗ್ ಜಡಿದು ಟ್ರೈನರನ್ನು ಕರೆಸುವಂತೆ ಪಟ್ಟು ಹಿಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಹೌದು! ಧಾರವಾಡದ ಮರಾಠಾ ಕಾಲೊನಿಯಲ್ಲಿರುವ ಫಿಟ್ನೆಸ್ ಫಸ್ಟ್ ಎಂಬ ಜಿಮ್‌ನಲ್ಲಿ ಸಾಬೀರ್ ಎಂಬ ಜಿಮ್ ಟ್ರೇನರ್ ಕೆಲಸ ಮಾಡುತ್ತಿದ್ದಾನೆ. ಈತ ಜಿಮ್‌ಗೆ ಬರುತ್ತಿದ್ದ ಯುವತಿಯರಿಗೆ ಬ್ಯಾಡ್ ಟಚ್ ಮಾಡುತ್ತಿದ್ದಾನೆ. ಕೆಟ್ಟ ಉದ್ದೇಶ ಇಟ್ಟುಕೊಂಡೇ ಯುವತಿಯರೊಂದಿಗೆ ದುರ್ವತನೆ ಮಾಡುತ್ತಿದ್ದಾನೆ. ಅಲ್ಲದೇ ಈತ ಈ ಜಿಮ್‌ಗೆ ಹಿಂದೂ ಟ್ರೇನರ್‌ಗಳು ಯಾರೂ ಬರದಂತೆ ನೋಡಿಕೊಳ್ಳುವ ಮೂಲಕ ಯುವತಿಯರ ಚಿತ್ರ ಬಿಡಿಸಿ ಅಸಹ್ಯಕರ ಕಾಮೆಂಟ್ ಮಾಡುತ್ತಿದ್ದಾನೆ. ಆದ್ದರಿಂದ ಆತನ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಮ್‌ಗೆ ಬರುತ್ತಿದ್ದ ಕೆಲ ಮಹಿಳೆಯರು ಹಾಗೂ ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಸ್ಥಳಕ್ಕೆ ಸಾಬೀರ್‌ನನ್ನು ಕರೆಯಿಸುವಂತೆ ಜಿಮ್ ಮಾಲೀಕರಿಗೆ ಹೇಳಿದರೂ ಅವರು ಆತನನ್ನು ಕರೆಯಿಸಿಲ್ಲ ಎಂದು ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಮ್ ಬಳಿ ಜಮಾಯಿಸಿದ್ದರು. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಕೂಡ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸಾಬೀರ್ ಎಂಬ ಜಿಮ್ ಟ್ರೇನರ್‌ಗೆ ಈಗಾಗಲೇ ವಿವಾಹ ನಿಶ್ಚಯವಾಗಿದ್ದರೂ ಆತ ಇಲ್ಲಿ ಈ ರೀತಿಯ ಕೃತ್ಯ ನಡೆಸುತ್ತಿದ್ದಾನೆ. ಆತನ ಮೇಲೆ ನಾವು ದೂರ ಸಹ ನೀಡುತ್ತೇವೆ ಎಂದು ಬಜರಂಗದಳ ಮುಖಂಡರು ತಿಳಿಸಿದ್ದಾರೆ.

 

Tags:

error: Content is protected !!