Belagavi

ಬೈಕ್‌ಗಳ ನಡುವೆ ಅಪಘಾತ; ಇಬ್ಬರು ಬೈಕ್ ಸವಾರರ ಸ್ಥಳದಲ್ಲೇ ದುರ್ಮರಣ

Share

• ಮಸಬಿನಾಳ ಬಳಿ ಬೈಕ್‌ಗಳ ನಡುವೆ ಸಂಘರ್ಷ
• ಸ್ಥಳದಲ್ಲೇ ಇಬ್ಬರು ಬೈಕ್ ಸವಾರರ ದುರ್ಮರಣ
• ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರ
• ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಎರಡು ಬೈಕ್ ಗಳ ಮದ್ಯ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ತಾಲೂಕಿನ ಮಸಬಿನಾಳ ಬಳಿ ಸಂಭವಿಸಿದೆ.

ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ತಾಂಡಾದ ಸಂತೋಷ. ಲಾಲು. ಚವಾಣ್ (32). ದೇಗಿನಾಳ ಗ್ರಾಮದ ಭೀಮನಗೌಡ ಪಾಟೀಲ (45) ಮೃತ ದುರ್ದೈವಿಗಳು. ಇನ್ನೂ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು ಗಾಯಾಳು ಗಳನ್ನು ಚಿಕಿತ್ಸೆಗಾಗಿ ಬಸವನ ಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ‌ ಪರಿಶೀಲನೆ ನಡೆಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿ ಪ್ರಕರಣ ದಾಖಲಾಗಿದೆ.

Tags:

error: Content is protected !!