ರಾಜ್ಯದಲ್ಲಿ ಹಿಂದಿ ಕಡ್ಡಾಯವಲ್ಲ ಎಂಬ ನಿರ್ಧಾರ ತೆಗೆದುಕೊಂಡ ಸರಕಾರದ ನಡೆಯನ್ನು ಸ್ವಾಗತಿಸಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಸೋಮವಾರ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ರಾಜ್ಯದಲ್ಲಿ ಕೇಂದ್ರ ಸರಕಾರ ಹಿಂದಿ ಹೆರಿಕೆ ಮಾಡಿ ಕನ್ನಡ ಭಾಷೆಗೆ ಕುತ್ತು ತರುವ ಕೆಲಸ ಮಾಡುತ್ತಿತ್ತು. ಅದನ್ನು ರಾಜ್ಯ ಸರಕಾರ ನಿರಾಕರಿಸಿ ಹಿಂದಿ ಕಡ್ಡಾಯವಲ್ಲ ಎಂಬ ನಿಲುವು ತೆಗೆದುಕೊಂಡಿದ್ದು ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ.
ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ, ಸಂಗೀತಾ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
