BELAGAVI

ಅಭಿವೃದ್ಧಿ ಕೆಲಸದಲ್ಲಿ ರಾಜಕಾರಣ ಮಾಡಲ್ಲ, ಹನುಮಾನ ನಗರದ ಈಜುಕೊಳ ಶೀಘ್ರದಲ್ಲೇ ಲೋಕಾರ್ಪಣೆ: ಶಾಸಕ ಆಸೀಫ್ ಸೇಠ್ ಭರವಸೆ

Share

ಮಾದರಿ ಕೆಲಸ ಮಾಡಿದವರನ್ನು ಮತ್ತು ಸದಾ ಜನರಿಗಾಗಿ ಶ್ರಮಿಸುವವರನ್ನು ಸದಾ ಸ್ಮರಿಸಬೇಕು” ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಅವರು ತಿಳಿಸಿದ್ದಾರೆ. ಬೆಳಗಾವಿ ನಗರದ ಹನುಮಾನ ನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಈಜುಕೊಳದ ತಾಂತ್ರಿಕ ದೋಷ ಸರಿಪಡಿಸಿ ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳಿಸುವುದಾಗಿ ಭರವಸೆ ನೀಡಿದರು.

ಹನುಮಾನ ನಗರದ ಗಾಜಿನ ಮನೆ ಆವರಣದಲ್ಲಿ ಸೋಮವಾರ ನಡೆದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಆಸೀಫ್ ಸೇಠ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೀತಿ ಕಾಮಕರ, ಉಪ ಮಹಾಪೌರರಾದ ಹನುಮಂತ ಕೊಂಗಾಲಿ, ನಗರಸೇವಕರಾದ ಸಂದೀಪ ಅ. ಜೀರಿಗಾಳ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಡಿ. ಸುಲಿಗಾವಿ ಸೇರಿದಂತೆ ಇನ್ನುಳಿದ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಪದಾಧಿಕಾರಿಗಳು ಸುಮಾರು 9 ವರ್ಷದ ಹಿಂದೆ ನಿರ್ಮಿಸಲಾದ ಈಜುಕೊಳದ ತಾಂತ್ರಿಕ ದೋಷವನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.


ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು ಮಾದರಿ ಕೆಲಸವನ್ನು ಮಾಡಿದವರು ಮತ್ತು ಸದಾ ಕೆಲಸ ಮಾಡುವವರನ್ನು ನೆನೆಯುತ್ತಿರಬೇಕು. ಸಹೋದರ ಫೀರೋಜ್ ಸೇಠ್ ಅವರ ನುಡಿಗಳನ್ನು ನೆನಪಿಸಿಕೊಂಡ ಅವರು ಜನಪರ ಕೆಲಸಗಳನ್ನು ಮಾಡಬೇಕೆಂದು ಅವರು ಹೇಳಿದ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಕೇವಲ ಕಸ ವಿಲೇವಾರಿ ಮಾತ್ರವಲ್ಲದೇ, ಉದ್ಯಾನ, ರಸ್ತೆ, ಚರಂಡಿ, ಬೀದಿ ದೀಪ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ನಾವು ಸದಾಸಿದ್ಧರಾಗಿದ್ದೇವೆ. ಹನುಮಾನ ನಗರದಲ್ಲಿ ನಿರ್ಮಿಸಿದ ಈಜುಕೊಳದ ಕೆಲ ತಾಂತ್ರಿಕ ದೋಷವನ್ನು ಪರಿಹರಿಸಿ ಶೀಘ್ರವೇ ಲೋಕಾರ್ಪಣೆಗೊಳಿಸಲಾಗುವುದು. ಜನರಿಂದ ಆಯ್ಕೆಯಾದ ನಾವು ಪ್ರಾಮಾಣಿಕವಾಗಿ ನಮ್ಮ ಕರ್ತವ್ಯವನ್ನು ಪೂರ್ಣಗೊಳಿಸಲಾಗುವುದು. ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಮಾಡಲ್ಲ ಎಂದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹನುಮಾನ ನಗರದ ರಹಿವಾಸಿಗಳು ಭಾಗಿಯಾಗಿದ್ಧರು.

Tags:

error: Content is protected !!