BELAGAVI

ಮಜಗಾಂವದ ಆದಿನಾಥ ಜೈನ ಮಂದಿರದಲ್ಲಿ ಭಗವಾನ್ ಮಹಾವೀರರ ಅದ್ಧೂರಿ ಮೆರವಣಿಗೆ:

Share

ಬೆಳಗಾವಿಯ ಮಜಗಾಂವ ಗ್ರಾಮದಲ್ಲಿ ಭಗವಾನ್ ಮಹಾವೀರರ ಜನ್ಮಕಲ್ಯಾಣ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಇಲ್ಲಿನ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಮಹಾವೀರರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಮುನಿಗಳ ಸಾನ್ನಿಧ್ಯದಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಪರಮ ಪೂಜ್ಯ 108 ಶ್ರೀ ಮಹಾನಸಾಗರ ಮುನಿಮಹಾರಾಜರ ದಿವ್ಯ ಮಾರ್ಗದರ್ಶನದಲ್ಲಿ ಭಗವಾನ್ ಮಹಾವೀರರ ನೂತನ ಉತ್ಸವ ಮೂರ್ತಿಯ ಮೆರವಣಿಗೆಯು ಮಜಗಾಂವದ ಪ್ರಮುಖ ಬೀದಿಗಳಲ್ಲಿ ಸಡಗರದಿಂದ ನಡೆಯಿತು. ಜನ್ಮಕಲ್ಯಾಣದ ಈ ಪವಿತ್ರ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಮುಖರು, ವರ್ಷಕ್ಕೊಮ್ಮೆ ಬರುವ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನೇಂದ್ರರ ಅಭಿಷೇಕ ಹಾಗೂ ಪೂಜೆ ಮಾಡುವುದರೊಂದಿಗೆ ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೆರವಣಿಗೆಯ ಉದ್ದಕ್ಕೂ ಜೈನ ಶ್ರಾವಕ-ಶ್ರಾವಕಿಯರು ವಾದ್ಯಗೋಷ್ಠಿಗಳ ಲಯಕ್ಕೆ ತಕ್ಕಂತೆ ರೂಪಕ ವಾಹನದ ಸುತ್ತ ನೃತ್ಯ ಮಾಡಿ ಜಿನ ಭಗವಂತರಿಗೆ ಭಕ್ತಿ ಸಮರ್ಪಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಜಗಾಂವ ಗ್ರಾಮದ ಪಂಚ್ ಕಮಿಟಿ, ಚತುರ್ಮಾಸ ಸಮಿತಿ, ಯುವಕ ಹಾಗೂ ಮಹಿಳಾ ಮಂಡಳಿಗಳು ಮತ್ತು ಪಾಠಶಾಲೆಯ ಪುಟಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣ್ಯ ಲಾಭ ಪಡೆದರು. ಇಡೀ ಗ್ರಾಮವು ‘ಜೈ ಜಿನೇಂದ್ರ’ ಘೋಷಣೆಗಳೊಂದಿಗೆ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

Tags:

error: Content is protected !!