ಬೆಳಗಾವಿಯ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಂಝರ್ ಗಲ್ಲಿಯಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ನಮ್ಮ ಕ್ಲಿನಿಕ್ ನಿರ್ಮಿಸಲಾಗುತ್ತಿದ್ದು, ಇಂದು ಶಾಸಕ ಆಸೀಫ್ ಸೇಠ್ ಅವರು ಕಾಮಗಾರಿಗೆ ಚಾಲನೆಯನ್ನು ನೀಡಿದರು.

ಬೆಳಗಾವಿಯ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಂಝರ್ ಗಲ್ಲಿಯಲ್ಲಿ ನಮ್ಮ ಕ್ಲಿನಿಕ್ ಕಾಮಗಾರಿಗೆ ಇಂದು ಶಾಸಕ ಆಸೀಫ್ ಸೇಠ್ ಅವರು ಕಾಮಗಾರಿಗೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ನಗರ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅತಿ ವಿರಳವಾಗಿದ್ದವು. ಛತ್ರಪತಿ ಶಿವಾಜೀ ನಗರ, ವೈಭವ ನಗರ, ಬಸವನ ಕುಡಚಿ, ಕಣಬರ್ಗಿಗಳಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ನಗರದ ಹೃದಯಭಾಗದಲ್ಲಿರುವ ಖಂಝರ್ ಗಲ್ಲಿಯಲ್ಲಿಯೂ ಶಾಸಕರ ನಿಧಿಯಿಂದ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಇಬ್ಬರು ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ತಪಾಸಣೆ ಮತ್ತು ಔಷಧಿಗಳು ಉಚಿತವಾಗಿ ದೊರೆಯಲಿವೆ. ಉತ್ತರ ಮತಕ್ಷೇತ್ರದಲ್ಲಿ ಇನ್ನು 2-3 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುವ ಉದ್ಧೇಶವಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಗಡಾದಿ ಅವರು ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಅವರ ಪ್ರಯತ್ನದಿಂದ ನಗರದ ಕೇಂದ್ರ ಭಾಗದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ಕಾಮಗಾರಿಯನ್ನು ಕೈಗೊಂಡಿದ್ದಾರೆ. ರಕ್ತ ಪರೀಕ್ಷೆ, ಔಷಧಿ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳಿಗಾಗಿ ಜಿಲ್ಲಾಸ್ಪತ್ರೆಗೆ ತೆರಳಬೇಕಾಗುತ್ತಿತ್ತು. ಆದರೇ, ಸ್ಥಳೀಯವಾಗಿ ಈಗ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ನಗರಸೇವಕ ಮುಝಮ್ಮಿಲ್ ಢೋಣಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
