Hukkeri

ಮಹಾವೀರರ ಅಹಿಂಸಾ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೋಳ್ಳ ಬೇಕು – ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳಿ.

Share

ಭಗವಾನ ಮಹಾವೀರರ ಸತ್ಯ,ಅಹಿಂಸೆ ಮತ್ತು ಶಾಂತಿ ಪಾಲನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳುವದು ಅವಶ್ಯಕವಾಗಿದೆ ಎಂದು ಹುಕ್ಕೇರಿ ಗ್ರೇಡ್ ತಹಸಿಲ್ದಾರ ಪ್ರಕಾಶ ಕಲ್ಲೋಳಿ ಹೇಳಿದರು.

ಅವರು ಇಂದು ಮಹಾವೀರ ಜಯಂತಿ ಅಂಗವಾಗಿ ತಾಲೂಕಾ ಆಡಳಿತ ಮತ್ತು ಜೈನ ಸಮಾಜದ ವತಿಯಿಂದ ಹಮ್ಮಿಕೊಂಡ ಮಹಾವೀರ ಜಯಂತಿಯನ್ನು ಮಹಾವೀರ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ವಿಷೇಶ ಪೂಜೆ ನೆರವೇರಿಸಿದರು.
ನಂತರ ಹುಕ್ಕೇರಿ ನಗರದ ಹಳ್ಳದಕೇರಿಯ ಜೈನ್ ಬಸದಿಯಲ್ಲಿ ಶ್ರಾವಕ ಶ್ರಾವಕಿಯರು ಪಾಶ್ವ೯ನಾಥ ತಿರ್ಥಂಕರಿಗೆ ಪೂಜೆ ಸಲ್ಲಿಸಿದರು , ಸಮಾಜದ ಮುಖಂಡರು ಭಗವಾನ ಮಹಾವೀರ ಕುರಿತ ಹಳ್ಳಿ ಸಂದೇಶ ಗ್ರಂಥ ಬಿಡುಗಡೆ ಗೊಳಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಸಿ ಪಿ ಪಾಟೀಲ ಮತ್ತು ಪ್ರಜ್ವಲ ನಿಲಜಗಿ ಭಗವಾನ ಮಹಾವೀರರ ಮುಖ್ಯ ಧ್ಯೇಯ ಸತ್ಯ ,ಅಹಿಂಸೆ ಮತ್ತು ಶಾಂತಿ ಪಾಲನೆ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೋಳ್ಳ ಬೇಕು,ಅಹಿಂಸಾ ವಾದಿಗಳಾಗಿ ಜಗತ್ತಿನ ಕಲ್ಯಾಣಕ್ಕಾಗಿ ಅವರ ತತ್ವಗಳ ಪಾಲನೆ ಮಾಡೋಣ , ಇಂದು ಹಳ್ಳಿ ಸಂದೇಶ ಗ್ರಂಥ ಬಿಡುಗೊಡೆ ಗೋಳಿಸಿಲಾಗಿದೆ ಎಂದರು

ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ರೋಹಿತ್ ಚೌಗಲೆ, ಸಂಜಯ ನೀಲಜಗಿ, ಕಿರಣ ಸೋಲ್ಲಾಪುರೆ, ಸುಕುಮಾರ ಖತಗಲ್ಲಿ, ಭರಮಪ್ಪಾ ಪಾಟೀಲ, ಮಹಾವೀರ ಭೋಳೆ ಸುನಿಲ ಸೇರಿ, ಬಾಪು ಮುರಗೋಡೆ, , ಸುಕುಮಾರ ಮುರಗುಡೆ, ಶಿಲಾ ಸೋಲ್ಲಾಪುರೆ, ಸಂಗೀತಾ ನಿಲಜಗಿ, ರಾಜಶ್ರೀ ಸೋಲ್ಲಾ ಪುರೆ, ಜ್ಯೋತಿ ಸೋಲ್ಲಾ, ವಿಜೇತಾ ಖತಗಲ್ಲಿ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಮಹಾವೀರ ಜಯಂತಿ ಕಾರ್ಯಕ್ರಮ ವಿಳಂಭವಾಗಿದ್ದರಿಂದ ಜೇನ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

Tags:

error: Content is protected !!