BELAGAVI

ಬೆಳಗಾವಿಯಲ್ಲಿ ಮೊಳಗಿದ ‘ಬದುಕಿ-ಬದುಕಲು ಬಿಡಿ’ ಸಂದೇಶ: ಮಹಾವೀರ ಜಯಂತಿ ನಿಮಿತ್ತ ಬೃಹತ್ ಬೈಕ್ ರ್ಯಾಲಿ; ಕುಂದಾನಗರಿಯಲ್ಲಿ ಜೈನ ಧರ್ಮದ ಶಿಸ್ತು, ಸಂಭ್ರಮದ ಮೆರುಗು!

Share

ಬೆಳಗಾವಿಯಲ್ಲಿಂದು ಭಗವಾನ್ ಶ್ರೀ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಗೆ ಪಂಜಾಬ್ ರಾಜ್ಯಪಾಲರಾದ ಗುಲಾಬ್ ಚಂದ್ ಕಠಾರಿಯಾ ಚಾಲನೆ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಜೈನ ಬಾಂಧವರು ಪಾಲ್ಗೊಂಡಿದ್ದು ಜೈನ ಧರ್ಮದ ಸಂದೇಶದೊಂದಿಗೆ ಸಾಮಾಜೀಕ ಸಂದೇಶವನ್ನು ನೀಡಿದರು.

ಬೆಳಗಾವಿ ಸಿ.ಪಿ.ಎಡ್. ಮೈದಾನದಲ್ಲಿ ಭಗವಾನ್ ಶ್ರೀ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಹಿನ್ನೆಲೆ ಪಂಜಾಬ್’ನ ರಾಜ್ಯಪಾಲರಾದ ಗುಲಚಂದ ಕಠಾರಿಯಾ, ಅನೀತಾ ಕಠಾರಿಯಾ, ಶಾಸಕ ಅಭಯ್ ಪಾಟೀಲ್, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹಣುಮಂತ ಕೊಂಗಾಲಿ, ಮಾಜಿ ಶಾಸಕ ಸಂಜಯ್ ಪಾಟೀಲ್, ನರೇಂದ್ರ ಜೈನ್, ಸಂತೋಷ್ ಜೈನ್, ಲಲೀತ್ ಸಂಘವಿ-ಕಟಾರಿಯಾ, ರಾಜೇಂದ್ರ ಜೈನ್, ಪ್ರವೀಣ್ ಬಜನಾ, ಸುನೀಲ್ ಹಣುಮಣ್ಣವರ, ಭರತ್ ಪಾಟೀಲ್ ಇನ್ನುಳಿದ ಗಣ್ಯರು ಈ ಬೃಹತ್ ರ್ಯಾಲಿಗೆ ಚಾಲನೆಯನ್ನು ನೀಡಿದರು.

ರ್ಯಾಲಿಯಲ್ಲಿ ಧಾರ್ಮಿಕ ಮತ್ತು ಸಾಮಾಜೀಕ ಸಂದೇಶವನ್ನು ನೀಡುವ ಪ್ರತಿಕೃತಿಗಳನ್ನು ಹೊತ್ತ ಬೈಕ್’ಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದವು.

ತಮ್ಮ ದ್ವಿಚಕ್ರವಾಹನದೊಂದಿಗೆ ಎತ್ತಿನ ಗಾಡಿಯಲ್ಲಿರುವ ರೈತರ ಪ್ರತಿಕೃತಿ ಹೊತ್ತು ತಂದ ಹರ್ಷ ಗುಂಡಪ್ಪನವರ, ಜೈನ ಧರ್ಮದ ಸಂದೇಶದೊಂದಿಗೆ ಕೃಷಿಯನ್ನು ಉಳಿಸುವ ಸಂದೇಶವನ್ನು ನೀಡಿದರು. ಕೃಷಿಯನ್ನು ಉಳಿಸದಿದ್ದರೇ, ಮುಂದಿನ ದಿನಗಳಲ್ಲಿ ಫಿಜ್ಜಾ ಬರ್ಗರ್’ನಂತೆ ತರಕಾರಿಗಳನ್ನು ಕೂಡ ಆರ್ಡರ್ ಮಾಡುವ ಸಮಯ ಬರಬಹುದು ಎಂದರು.

 

ತಮ್ಮ 50 ಜನರ ತಂಡದೊಂದಿಗೆ ಆಗಮಿಸಿದ ಯುವತಿಯೊರ್ವಳು ಬದುಕಿ ಮತ್ತು ಬದುಕಲು ಬಿಡಿ ಎಂಬ ಜೈನ್ ಧರ್ಮದ ಸಂದೇಶವನ್ನು ನೀಡಲಾಗುತ್ತಿದೆ. ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರ ಬಂದು ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು.

ಭರತ ಚಕ್ರವರ್ತಿ ಮತ್ತು ಅವರ ತಂದೆಯನ್ನು ಹೊತ್ತು ಮೆರೆಸುವ ಪೃತಿಕೃತಿಯೊಂದಿಗೆ ಬಂದ ಕೃಷಾ ಪದ್ಮಣ್ಣವರ ಇತಿಹಾಸದ ಘಟನೆಗಳ ಮೇಲೆ ಬೆಳಕು ಚೆಲ್ಲಿದರು. ಮಹಿಳೆಯರೂ ಇಂದು ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಯಾವುದೇ ಅಡೆತಡೆಗೆ ಒಳಗಾಗದೇ, ಎಲ್ಲದರಲ್ಲಿಯೂ ಮುನ್ನುಗ್ಗಬೇಕೆಂದು ಹೇಳಿದರು.

ರ್ಯಾಲಿಯೂ ಹಿಂಡಲಗಾ ಶ್ರೀ ಗಣೇಶ್ ಮಂದಿರ, ಹನುಮಾನ್ ನಗರ ಸರ್ಕಲ್, ಕ್ಲಬ್ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ತ್ಯಾಗವೀರ ಸಿರಸಂಗಿ ಲಿಂಗರಾಜ್ ಕಾಲೇಜು ರಸ್ತೆ, ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದ ಮಾರ್ಗವಾಗಿ ಸಂಚರಿಸಿ, ಶಹಾಪೂರದ ಮಹಾವೀರ ಭವನಕ್ಕೆ ತಲುಪಿ ಕೊನೆಗೊಂಡಿತು.

Tags:

error: Content is protected !!