Chikkodi

ರೈತರಿಗೆ ನೀಡುತ್ತಿರುವ ಸಾಲವನ್ನು 40 ಸಾವಿರಿಂದ 50 ಸಾವಿರಕ್ಕೆ ಹೆಚ್ಚಿಸಿ:ಎಂಎಲ್ಸಿ ಪ್ರಕಾಶ ಹುಕ್ಕೇರಿ

Share

ರೈತರಿಗೆ ನೀಡುತ್ತಿರುವ 40,000 ಸಾಲವನ್ನು ಹೆಚ್ಚಿಸಿ ಐವತ್ತು ಸಾವಿರ ನೀಡಬೇಕೆಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ಒತ್ತಾಯಿಸಿದ್ದೇನೆ. ಮುಂದಿನ ದಿನಮಾನಗಳಲ್ಲಿ ಹೋರಾಟ ಮಾಡಿ ಪ್ರತಿ ರೈತರಿಗೆ 50,000 ರೂಪಾಯಿಗಳು ಒದಗಿಸಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದರು.

ಅವರು ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹತ್ತರವಾಟ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.
ಹುಕ್ಕೇರಿ ಮತ್ತು ಕತ್ತಿ ಮನೆತನ ಬೇರೆ ಇಲ್ಲ. ರಮೇಶ್ ಕತ್ತಿ ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರಾದ ನಂತರ ಅನೇಕ ಸಂಸ್ಥೆಗಳಿಗೆ ಅನುದಾನವನ್ನು ನೀಡಿದ್ದಾರೆ. ನಾನು ಸಹ ಅನೇಕ ಪಿಕೆಪಿಎಸ್ ಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದೇನೆ. ಈ ಭಾಗದ ಜನರ ಬೇಡಿಕೆ ಅನುಸಾರ ಸಂಕೇಶ್ವರ- ಖಡಡಕಲಾಟ ಬಸ್ ಸೇವೆ ಪ್ರಾರಂಭಿಸಲಾಗುವುದು. ಮುಂದಿನ ದಿನಮಾನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ 50 ವರ್ಷದ ರಾಜಕಾರಣದಲ್ಲಿ ಪಿಕೆಪಿಎಸ್ ಗಳಿಗೆ 25 ರಿಂದ 50 ಲಕ್ಷ ವರೆಗೆ ಅನುದಾನ ನೀಡಿದ ರಾಜ್ಯದ ಏಕಮೇವ ಜನಪ್ರತಿನಿಧಿ ಪ್ರಕಾಶ ಹುಕ್ಕೇರಿ ಆಗಿದ್ದಾರೆ. ನಾನು ಸಹ ಈ ಸಂಸ್ಥೆಗೆ ಏಳು ಲಕ್ಷ ಪತ್ತ ಇದ್ದಿದ್ದು 4.5 ಕೋಟಿ ಆಗಲಿಕ್ಕೆ ಸಹಾಯ ಮಾಡಿದ್ದೇನೆ. ರೈತ ಉದ್ಧಾರವಾದರೆ ಮಾತ್ರ ದೇಶ ಉದ್ಧಾರವಾಗಲಿದೆ. ನಾವು ಬೇರೆ ಪಕ್ಷದಲ್ಲಿ ಇದ್ರೂ ಸಹ ರೈತರಿಗೆ ನಮ್ಮ ಸಹೋದರ ಎಂದು ತಿಳಿದು ರೈತರ ಮನೆಯವರಿಗೆ ಯೋಜನೆಗಳು ನೀಡುವ ಕೆಲಸ ಮಾಡುತ್ತೇವೆ.

ದಿವ್ಯ ಸಾನಿಧ್ಯ ವಹಿಸಿದ ಚಿಕ್ಕೋಡಿಯ ಸಂಪಾದನಾ ಮಹಾ ಸ್ವಾಮೀಜಿಗಳು ಮಾತನಾಡಿ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗೆ ಹೋಗಿ ಸಹಿ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳು ಮಂಜೂರು ಮಾಡುವ ಏಕೈಕ ವ್ಯಕ್ತಿ ಅಂದ್ರೆ ಪ್ರಕಾಶ ಹುಕ್ಕೇರಿ. ಸರ್ಕಾರ ಯಾವುದೇ ಪಕ್ಷದವಿರಲಿ ಕೆಲಸ ಮಾಡುವ ಛಲ ಪ್ರಕಾಶ ಹುಕ್ಕೇರಿ ಅವರಲ್ಲಿದೆ. ಪಿಕೆಪಿಎಸ್ ಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಆಗಲಿ ಮೂಲಭೂತ ಸೌಕರ್ಯ ಕೆರೆಗಳು ತುಂಬುವ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಧ್ಯಕ್ಷ ಮಾರುತಿ ಖೋತ, ಸಲಹೆಗಾರರಾದ ನ್ಯಾಯವಾದಿಗಳಾದ ಅಶೋಕ ಹರಗಾಪುರೆ, ರವೀಂದ್ರ ಹಿರೇಕೊಡಿ, ಬ್ಯಾಂಕ್ ನಿರೀಕ್ಷಕ ಸಂತೋಷ ಪಾಟೀಲ್, ಉಪಾಧ್ಯಕ್ಷರಾದ
ಮಾರುತಿ ಖೋತ, ನಿರ್ದೇಶಕರಾದ
ಸದಾಶಿವ ಇಣಚಿ, ಅಪ್ಪಾಸಾಬ ಮುರಗಾಲಿ, ದಿನಕರ ಮಗದುಮ್ಮ, ರಮೇಶ ನಂದಗಾವಿ, ಮನೋಹರ ಮಾದಿಗ, ರಾಜೇಂದ್ರ ಗುಂಡಕಲ್ಲೆ, ಸಾಹೇಬದಾದಾ ಪಾಟೀಲ, ಶ್ರೀಮತಿ ಅನುಸುಯಾ ಮುಗಳಿ, ಶ್ರೀಮತಿ ಶೇವಂತಿ ಮಗದುಮ್ಮ, ಸೂರ್ಯಕಾಂತ ಬಡಿಗೇರ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರೋಹಿತ್ ಘರಬುಡೇ ಸೇರಿದಂತೆ ಗ್ರಾಮದ ಗಣ್ಯರು ಸದಸ್ಯರು ರೈತ ಬಾಂಧವರು ಉಪಸ್ಥಿತರಿದ್ದರು.

Tags:

error: Content is protected !!