Khanapur

ಖಾನಾಪೂರ ಪೋಲಿಸ್ ಕಾನ್ಸ್ಟೇಬಲ್ ಜಗದೀಶ್ ಕಾದ್ರೋಳ್ಳಿ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ

Share

ಖಾನಾಪೂರ ಪೋಲಿಸ್ ಠಾಣೆಯ ಕಾನ್ಸ್ಟೇಬಲ್ ಜಗದೀಶ್ ಕಾದ್ರೋಳ್ಳಿ ಅವರಿಗೆ 2025-26ರ ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಮಾಡಲಾಗಿದೆ ಜಗದೀಶ್ ಕಾದ್ರೋಳ್ಳಿ ಅವರು ಸುಮಾರು ನಾಲ್ಕು ವರ್ಷಗಳಿಂದ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ತಮ್ಮ ಕಾರ್ಯದಲ್ಲಿ ತೋರಿಸಿದ ದಕ್ಷತೆ 19 ವರ್ಷಗಳ ಕಾಲ ನೀಡಿದ ಸೇವೆ ಅದರಲ್ಲಿ ಅನೇಕ ಪ್ರಕರಣಗಳಲ್ಲಿ ಸಂಕೀರ್ಣ ಪ್ರಕರಣಗಳನ್ನು ಚಾಣಾಕ್ಷತೆಯಿಂದ ನಿರ್ವಹಣೆ ಕೊಲೆ, ಕಳ್ಳತನ ಮತ್ತು ಕಳ್ಳತನದ ಅನೇಕ ಗಂಭೀರ ಪ್ರಕರಣಗಳಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅವರ ಹೆಸರು ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅವರನ್ನು ಮಾನ್ಯ ಮುಖ್ಯಮಂತ್ರಿಗಳು ಸನ್ಮಾನಿಸಲಿದ್ದಾರೆ ಒಟ್ಟಿನಲ್ಲಿ ಖಾನಾಪೂರನಲ್ಲಿ ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದ ಕಾನ್ಟ್ಸೇಬಲ್ ಜಗದೀಶ್ ಕಾದ್ರೋಳ್ಳಿ ಅವರು ಖಾನಾಪೂರದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಖಾನಾಪೂರ ತಾಲೂಕಿನ ಜನತೆಯಿಂದ ಅವರನ್ನು ಅಭಿನಂದನೆಗಳನ್ನು ಸಲ್ಲಿಸಿ ಮಾಡಲಾಗುತ್ತಿದೆ.

Tags:

error: Content is protected !!