ನಾಳೆ ರವಿವಾ್ ಸಂಜೆ 4 ಗಂಟೆಗೆ ರಾಮನವಮಿ ಪ್ರಯುಕ್ತ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೆಟರ್ ಹಾಗೂ ಬಿಜೆಪಿ ಮುಖಂಡ ಉಮೇಶ ವಂದಾಲ ತಿಳಿಸಿದರು. ವಿಜಯಪುರ ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ನಾಳೆ ಈ ಮೆರವಣಿಗೆ ನಗರದ ರಾಮಮಂದಿರದಿಂದ ಆರಂಭವಾಗಿ ಸಿದ್ದೇಶ್ವರ ಮಂದಿರ ಮಾರ್ಗವಾಗಿ, ಗಾಂಧಿ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಸಂಚರಿಸಿ ಅಂಬಾಭವಾನಿ ಮಂದಿರದ ಬಳಿ ಸಮಾಪ್ತಿಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಶಿವಾಜಿ ವೃತ್ತದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಲಿದೆ. ಮಹಾರಾಷ್ಟ್ರದಿಂದ ವಿಶೇಷವಾಗಿ ಡೊಳ್ಳು ತಂಡಗಳು ಹಾಗೂ ಡಿಜೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ಕಾರ್ಯಕ್ರಮವು 10ನೇ ವರ್ಷದ ಸಂಭ್ರಮವಾಗಿರುವ ಹಿನ್ನೆಲೆಯಲ್ಲಿ, ವಿವಿಧ ಕಲಾ ತಂಡಗಳ ಪ್ರದರ್ಶನಗಳನ್ನು ಸಿನೆಮಾಟಿಕ್ ಶೈಲಿಯಲ್ಲಿ ಮೌಲ್ಯಮಾಪನ ಮಾಡಿ, ವೀಕ್ಷಣೆಗಳ (ವ್ಯೂವ್ಸ್) ಆಧಾರದ ಮೇಲೆ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ ₹11,111 ಮತ್ತು ದ್ವಿತೀಯ ಬಹುಮಾನವಾಗಿ ₹5,555 ನೀಡಲಾಗುವುದು ಎಂದು ವಿವರಿಸಿದರು.ಅದಲ್ಲದೆ ಈ ಶೋಭಾ ಯಾತ್ರೆಯಲ್ಲಿ ವಿಶೇಷವಾಗಿ ಸ್ವಯಂ ಭೂ ಫೌಂಡೇಶನ್ ವತಿಯಿಂದ ದಿಕ್ಷಾ ಬೀಸೆ ಅವರ ತಂಡದಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ತೆರೆದ ವಾಹನದಲ್ಲಿ ಭರತನಾಟ್ಯ ಕಾರ್ಯಕ್ರಮ ಜರುಗುವದು…
ರಾಮನವಮಿ ಪ್ರಯುಕ್ತ ರಾಮನ ಭವ್ಯ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ವಿಜಯಪುರ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
Vijaypura
ಹಿಂದೂ ಮುಖಂಡ ಉಮೇಶ ವಂದಾಲ ನೇತೃತ್ವದಲ್ಲಿ ನಾಳೆ ರಾಮಮೂರ್ತಿ ಭವ್ಯ ಮೆರವಣಿಗೆ
