BELAGAVI

ಕರ್ತವ್ಯನಿರತ ಪೌರಕಾರ್ಮಿಕೆಗೆ ಟಿಪ್ಪರ್ ಡಿಕ್ಕಿ;

Share

ಬೆಳಗಾವಿ- ಖಾನಾಪುರ ರಸ್ತೆಯಲ್ಲಿ ಬೆಳಗ್ಗೆ ನಗರವನ್ನು ಶುಚಿಗೊಳಿಸುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕೆಗೆ ಟಿಪ್ಪರ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಅವಕ್ಕಾ ಕೋಲ್ಕಾರ್ (50) ಮೃತ ಪೌರ ಕಾರ್ಮಿಕೆ. ಎಂದಿನಂತೆ ನಗರವನ್ನು ಶುಚಿಗೊಳಿಸುವ ವೇಳೆ ಬೆಳಗಾವಿ ನಗರದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಅವಕ್ಕಾಗೆ ಅಪ್ಪಳಿಸಿ ಹೋಗಿದೆ‌. ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮೇಯರ್ ವಾಣಿ ಜೋಶಿ, ಬೆಳಗಾವಿ ಪಾಲಿಕೆಯ ಪೌರಕಾರ್ಮಿಕೆ ಅವಕ್ಕಾಗಿ ಟಿಪ್ಪರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತ ಮಾಡಿ ಪರಾರಿಯಾದ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ‌ ಎಂದರು.

ಪಾಲಿಕೆ ಪರಿಸರ ಅಭಿಯಂತ ಹನುಮಂತ ಕಲಾದಗಿ ಮಾತನಾಡಿ, ಪೌರಕಾರ್ಮಿಕೆ ಅವಕ್ಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯ ಅವರಿಗೆ ಕೊಡಲಾಗುವುದು‌. ಅಲ್ಲದೆ ಅವರ ಅಂತ್ಯಸಂಸ್ಕಾರಕ್ಕೆ ಪಾಲಿಕೆಯಿಂದ ಆರ್ಥಿಕ ಸಹಾಯ ಮಾಡಲಾಗುವುದು. ರಸ್ತೆ ಅಪಘಾತದಲ್ಲಿ ಇದು ಎರಡನೇ ಪೌರಕಾರ್ಮಿಕರು ಬಲಿಯಾಗಿರುವುದು ಎಂದರು.
ಈ ಸಂದರ್ಭದಲ್ಲಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ಇನ್ನು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ವೇಳೆ ಶವಾಗಾರದ ಬಳಿ ಮೃತ ಪೌರ ಕಾರ್ಮಿಕರಾದ ಅವಕ್ಕಾ ಕೋಲಕಾರ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೇ ಕುಟುಂಬಸ್ಥರಿಗೆ Rs.50000/ ಹಣ ನೀಡಿ ತುರ್ತು ಖರ್ಚಿಗೆ ಉಪಯೋಗಿಸಲು ತಿಳಿಸಿದರು.

Tags:

error: Content is protected !!