ಅದೂ ಜಿಲ್ಲಾ ಕೇಂದ್ರ ಕಾರಾಗೃಹ, ಒಳಗಿರುವರಿಗೆ ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಲೇ ಇದ್ದವೂ. ಇದರ ವಿರುದ್ಧ ಒಳಗಿದ್ದವರಿಂದ ಅನ್ಯಾಯಕ್ಕೆ ಒಳಗಾದವರು ಸೇರಿದಂತೆ ಸಂಘಟನೆಗಳು ಸಾಕ್ಷಿ ಸಮೇತ ಹೋರಾಟ ಮಾಡಿದ್ವಿ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸ್ ಇಲಾಖೆ ಕೊನೆಗೂ ಒಳಗಿನವರು ಸೇರಿ ಹೊರಗಿನ ವ್ಯಕ್ತಿಯ ವಿರುದ್ಧ ಈಗ ಎಫಐಆರ್ ದಾಖಲಿಸಿ ಬಿಸಿ ಮುಟ್ಟಿಸಿದೆ. ಅರೇ ಯಾವ ಜಿಲ್ಲೆ ಕಾರಾಗೃಹ ಅದೂ, ಆ ಕಿಂಗ್ ಪೀನ್‌ಗಳು ಯಾರು ಅಂತೀ ಇಲ್ಲದೆ ನೋಡಿ ಕಂಪ್ಲೀಟ್ ವಿವರ.
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿಲೇ ಇತ್ತು. ಅಷ್ಟೇ ಏಕೆ ಇತ್ತೀಚೆಗಷ್ಟೇ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹುಬ್ಬಳ್ಳಿ ಬಿವಿಬಿ ಕಾಲೇಜುನಲ್ಲಿ ಮಗಳ ಕಳೆದುಕೊಂಡ ನೇಹಾ ತಂದೆ ನಿರಂಜನ ಕೂಡಾ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಇಲ್ಲಿನ ಕೈದಿಗಳಿಗೆ ತಂಬಾಕು ಉತ್ಪನ್ನಗಳನ್ನು ಪೂರೈಕೆ ಮಾಡಲಾಗಿದೆ. ಈ ಉತ್ಪನ್ನಗಳ ಪೂರೈಕೆ ಹಿಂದೆ ಬೇರೆ ಯಾರೂ ಇಲ್ಲ, ಕಾರಾಗೃಹದ ವಾರ್ಡನ್‌ಗಳೇ ಇದ್ದಾರೆ ವಿಚತ್ರವಾಗಿದೆ. ತಮ್ಮ ಹಣದಾಸೆಗೆ ವಾರ್ಡ್‌ನಗಳು ಬೆಲಿಯೇ ಎದ್ದು ಹೋಲ ಮೈಯಿದ ಹಾಗೇ ಆಗಿದೆ. ಕಾರಾಗೃಹದಲ್ಲಿನ ಇಬ್ಬರು ವಾರ್ಡನ್‌ಗಳು ಕೈದಿಗಳಿಗೆ ಗುಟ್ಕಾ ಚೀಟುಗಳನ್ನು ಪೂರೈಕೆ ಮಾಡುತ್ತಿದ್ದರು. ಇದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಧಾರವಾಡ ಉಪನಗರ ಠಾಣೆ ಪೊಲೀಸರು ಕಾರಾಗೃಹದ ಇಬ್ಬರು ವಾರ್ಡನ್ ಹಾಗೂ ಗುಟ್ಕಾ ಚೀಟುಗಳನ್ನು ತಂದು ಕೊಟ್ಟು ಹೋಗುತ್ತಿದ್ದ ಓರ್ವ ಆಟೊ ಚಾಲಕನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಜೈಲಿನೊಳಗೆ ಗುಟ್ಕಾ, ಮದ್ಯ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳಿಗೆ ನಿಷೇಧವಿದೆ. ಕಾರಾಗೃಹ ಎಂದರೆ ಒಬ್ಬ ಕೈದಿ ತಾನು ನರಕಯಾತನೆ ಅನುಭವಿಸಲು ಬಂದ ಸ್ಥಳವಿದ್ದಂತೆ. ಆದರೆ, ಧಾರವಾಡದ ಈ ಕಾರಾಗೃಹ ಕೈದಿಗಳಿಗೆ ನರಕ ಅಲ್ಲ ಸ್ವರ್ಗದಂತಾಗಿದೆ. ಈ ಕಾರಾಗೃಹದಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಅಲ್ತಾಫ್ ಶೇಖಸನದಿ, ರಾಜು ಸೊಲಬಣ್ಣವರ ಎಂಬುವವರೇ ಕೈದಿಗಳಿಗೆ ಗುಟ್ಕಾ ಚೀಟುಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದರು. ಮುನೀರ್‌ಅಹ್ಮದ್ ಬೆಟಗೇರಿ ಎಂಬ ಆಟೊ ಚಾಲಕ ಗುಟ್ಕಾ ಚೀಟುಗಳನ್ನು ವ್ಯವಸ್ಥಿತವಾಗಿ ತಂದು ಜೈಲಿನ ಗೇಟ್ ಮುಂದೆ ಇಟ್ಟು ಹೋಗುತ್ತಿದ್ದ. ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಈ ಇಬ್ಬರೂ ವಾರ್ಡನ್‌ಗಳು ಕೈದಿಗಳಿಗೆ ಅವುಗಳನ್ನು ಪೂರೈಕೆ ಮಾಡುತ್ತಿದ್ದರು.
ಜೈಲಿನೊಳಗೆ ಕ್ಯಾಂಟೀನ್ ನಡೆಸುತ್ತಿದ್ದ ಈ ಇಬ್ಬರೂ ವಾರ್ಡನ್‌ಗಳು ಈ ರೀತಿ ಗುಟ್ಕಾಗಳನ್ನು ಎಷ್ಟು ವರ್ಷಗಳಿಂದ ಕೈದಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ. ಕೇವಲ ತಂಬಾಕು ಉತ್ಪನ್ನಗಳನ್ನು ಮಾತ್ರ ಪೂರೈಕೆ ಮಾಡಲಾಗಿದೆಯಾ ಅಥವಾ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಪೂರೈಕೆಯೂ ನಡೆಯುತ್ತಿದೆಯಾ ಎಂಬುದರ ಬಗ್ಗೆಯೂ ಸ್ಪಷ್ಟವಾದ ತನಿಖೆಯಿಂದ ಹೋರ ಬರಬೇಕಾಗಿದೆ.
ಒಟ್ಟಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಹಾಗೂ ಹತ್ಯೆಯಾದ ನೇಹಾ ಹಿರೇಮಠ ತಂದೆ ನಿರಂಜನ ಮಾಡಿದ ಆರೋಪಕ್ಕೆ ಸಾಕ್ಷಿ ಎಂಬಂತೆ ಕಾರಾಗೃಹದಲ್ಲಿ ಈ ರೀತಿಯ ಅವ್ಯವಹಾರ ನಡೆಯುತ್ತಿದ್ದು, ಇದು ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಗೆ ದಂಗು ಬಡಿಸುದೆ. ಸದ್ಯ ಇಬ್ಬರು ವಾರ್ಡನ್‌ಗಳ ಮೇಲೆ ದೂರು ದಾಖಲಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ಮುಂದೆ ಯಾವ ರೀತಿಯ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಷ್ಟೇ.
