Khanapur

ಅರಣ್ಯ ಇಲಾಖೆಯ ಜನಪ್ರಿಯ ಅಧಿಕಾರಿ ಎಸ್.ಎಸ್. ನಿಂಗಾಣಿ ಅವರಿಗೆ ಡಿಎಫ್‌ಒ ಆಗಿ ಬಡ್ತಿ

Share

ಅರಣ್ಯ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಸ್ತುತ್ಯಾರ್ಹ ಸೇವೆ ಸಲ್ಲಿಸಿದ ದಕ್ಷ ಅಧಿಕಾರಿ ಎಸ್.ಎಸ್. ನಿಂಗಾಣಿ ಅವರಿಗೆ ಈಗ ಡಿಎಫ್‌ಒ ಆಗಿ ಪದೋನ್ನತಿ ದೊರೆತಿದೆ. ಬೆಳಗಾವಿ ಜಾಗೃತ ದಳದ ನೂತನ ಡಿಎಫ್‌ಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಖಾನಾಪೂರ ತಾಲೂಕಿನಲ್ಲಿ ಸುಮಾರು ಇಂಪ್ಪತ್ತು ವರ್ಷಗಳ ಹೆಚ್ಚಿನ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಸ್.ಎಸ್.ನಿಂಗಾಣಿ ಹೊನ್ನಾವರ ಎಸಿಎಫ್ ಆಗಿ ಸೇವೆ ಸಲ್ಲಿಸಿ ತದನಂತದಲ್ಲಿ ಶಿರಸಿ ಎಸಿಎಫ್ ಆಗಿ ಕಾರ್ಯಗೃತವಾಗಿದರು. ಸುಮಾರು ನಾಲ್ವತ್ತು ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ‌ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಸ್.ಎಸ್.ನಿಂಗಾಣಿ ಈಗ ‌ಡಿಎಫ್ಒ ಆಗಿ ಬಡ್ತಿಹೊಂದಿ‌ ಬೆಳಗಾವಿ ಜಾಗೃತದಳದ ಡಿಎಫ್ಒ ಆಗಿ ವರ್ಗಾವಣೆಗೊಂಡಿದ್ದಾರೆ ತನ್ನ ಕಾರ್ಯದಕ್ಷತೆಯಿಂದ ದಕ್ಷ ಅಧಿಕಾರಿಗಳಾಗಿ ಗುರುತಿಸ್ಪಟ್ಟಿರುವ ಎಸ್.ಎಸ್.ನಿಂಗಾಣಿ ಅವರು ಎಲ್ಲಿ ಸೇವೆ ಸಲ್ಲಿಸಿದಲ್ಲಿ ತಮ್ಮ ಅಪಾರ ಅಭಿಮಾನಿಗಳ ಬಳಗವನ್ನೆಹೊಂದಿದ್ದಾರೆ ಖಾನಾಪೂರ ತಾಲೂಕಿನಲ್ಲಿ ಸುಮಾರು ವರ್ಷಗಳ ಕಾಲ ದಕ್ಷತೆಯಿಂದ ಸೇವೆ ಸಲ್ಲಿಸಿದ ಎಸ್.ಎಸ್.ನಿಂಗಾಣಿ ಎಲ್ಲರ ಮನೆ ಮಗನಾಗಿ ತನ್ನ ಛಾಪು ಮೂಡಿಸಿದ್ದಾರೆ.

Tags:

error: Content is protected !!