ಬೆಳಗಾವಿಯ ಶಿವಬಸವ ನಗರ ಮತ್ತು ಛತ್ರಪತಿ ಶಿವಾಜಿನಗರ ಪ್ರಖಂಡದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಮೋತ್ಸವ ಕಾರ್ಯಕ್ರಮವು ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡಿದ್ದ ಸೈನಿಕ ನಗರದ ಹರಿ ಗುರು ಮಹಾರಾಜರು, ಪ್ರಭು ಶ್ರೀರಾಮನ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಹೇಗೆ ದಾರಿದೀಪವಾಗಿವೆ ಎಂಬುದರ ಕುರಿತು ಅದ್ಭುತವಾಗಿ ಆಶೀರ್ವಚನ ನೀಡಿದರು.

ಸೈನಿಕ ನಗರ ಗಣೇಶಪುರದ ಪರಮ ಪೂಜ್ಯ ಶ್ರೀ ಹರಿ ಗುರು ಮಹಾರಾಜರು ರಾಮೋತ್ಸವದ ಅಂಗವಾಗಿ ಮಾತನಾಡುತ್ತಾ, ಪ್ರಭು ಶ್ರೀರಾಮನು ಧರ್ಮ ಮತ್ತು ಸತ್ಯದ ಸಾಕಾರ ರೂಪವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ರಾಮಾಯಣದ ಪ್ರಸಂಗಗಳನ್ನು ಉಲ್ಲೇಖಿಸುತ್ತಾ ಅವರು ನೀಡಿದ ಮಾರ್ಗದರ್ಶನವು ನೆರೆದಿದ್ದ ಭಕ್ತರಲ್ಲಿ ಭಕ್ತಿಯ ಅಲೆ ಮೂಡಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜಗದೀಶ ಸೂರನ್ನವರ ಅವರು ಸಮಾಜ ಸಂಘಟನೆಯಲ್ಲಿ ಇಂತಹ ಉತ್ಸವಗಳ ಪಾತ್ರ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ನಗರ ಅಧ್ಯಕ್ಷ ಆನಂದ ಕರಲಿಂಗಣ್ಣವರ, ನಗರ ಕಾರ್ಯದರ್ಶಿ ನಾಗೇಶ ಕಾಂಬಳೆ, ಕ್ಷೇತ್ರ ಸಾಮರಸ್ಯ ಪ್ರಮುಖರಾದ ಶ್ರೀ ಕೃಷ್ಣ ಭಟ್ ಹಾಗೂ ಪ್ರಖಂಡ ಕಾರ್ಯದರ್ಶಿ ಮಂಜು ಉಪ್ಪಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿವಬಸವ ನಗರದ ಪ್ರಖಂಡದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಮೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.
