BELAGAVI

ಶ್ರೀರಾಮನ ಪಿತೃಭಕ್ತಿ ಇಂದಿನ ಪೀಳಿಗೆಗೆ ಆದರ್ಶ: ಕಾರಂಜಿಮಠದ ಶ್ರೀಗಳ ಆಶೀರ್ವಚನ

Share

ಬೆಳಗಾವಿಯ ರಾಮತೀರ್ಥನಗರದಲ್ಲಿ ಶ್ರೀರಾಮ ನವಮಿ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಂಗಲ ಆಶೀರ್ವಚನ ನೀಡಿದರು. “ತಂದೆ-ತಾಯಿಯನ್ನು ಮರೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಭು ಶ್ರೀರಾಮಚಂದ್ರನ ಪಿತೃಭಕ್ತಿ ಪ್ರತಿಯೊಬ್ಬರಿಗೂ ದಾರಿದೀಪವಾಗಲಿ” ಎಂದು ಶ್ರೀಗಳು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಉಪಮಹಾಪೌರರನ್ನು ಗೌರವಿಸಲಾಯಿತು.

ಬೆಳಗಾವಿಯ ರಾಮತೀರ್ಥನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದ ಈ ಧಾರ್ಮಿಕ ಸಮಾರಂಭವು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀರಾಮಚಂದ್ರ ಜನಿಸಿದ ದಿನವನ್ನು ಕೇವಲ ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲಿಯೂ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉದ್ಧೇಶದಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ. ಮಕ್ಕಳು ತಂದೆ-ತಾಯಿಯರು ಕಷ್ಟಪಟ್ಟು ಬೆಳೆಸಿದಾಗ ಉನ್ನತಮಟ್ಟಕ್ಕೆರಿದ ಮಕ್ಕಳು ತಂದೆ ತಾಯಿಯರನ್ನು ಮರೆತ ಉದಾಹರಣೆಗಳಿವೆ. ಇಂತಹ ವೇಳೆಯಲ್ಲಿ ಪ್ರಭುರಾಮ ಚಂದ್ರನ ಪಿತೃಭಕ್ತಿ ಎಲ್ಲರಿಗೂ ಆದರ್ಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೀತಿ ಕಾಮಕರ್ ಹಾಗೂ ಉಪಮಹಾಪೌರರಾದ ಹನುಮಂತ ಕೊಂಗಾಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ಸತ್ಕಾರ ಸ್ವೀಕರಿಸಿದ ಮಹಾಪೌರ ಪ್ರೀತಿ ಕಾಮಕರ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಸಾಹಿತಿ ಡಾ. ಸಿ. ಬಿ. ಮೊರಬದ ಅವರು ಶ್ರೀರಾಮನ ಆದರ್ಶಗಳ ಕುರಿತು ಪ್ರಭಾವಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಆಕಾಶವಾಣಿ ಗಾಯಕ ಶ್ರೀ ಗುರುರಾಜ ಕುಲಕರ್ಣಿ ಅವರ ಗೀತರಾಮಾಯಣ ಗಾಯನಕ್ಕೆ ಭಕ್ತರು ಮಂತ್ರಮುಗ್ಧರಾದರು. ಶ್ರೀ ರಾಘವೇಂದ್ರ ಕುಲಕರ್ಣಿ ವ್ಯಾಖ್ಯಾನ ನೀಡಿದರು ಹಾಗೂ ಸಂಘದ ಅಧ್ಯಕ್ಷರಾದ ಎ. ಕೆ. ಅಜಗೇರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Tags:

error: Content is protected !!