State

ದಾವಣಗೆರೆ ಉಪಸಮರ: ಅಲ್ಪಸಂಖ್ಯಾತರ ಮತ ವಿಭಜನೆಯಾಗಲ್ಲ, ಶಿವಶಂಕರಪ್ಪ ಕುಟುಂಬಕ್ಕೆ ಜಯ ನಿಶ್ಚಿತ

Share

ದಾವಣಗೆರೆ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯಗಳ ಕುರಿತ ಚರ್ಚೆಗೆ ಈಗ ತೆರೆ ಬಿದ್ದಿದೆ. ಪಕ್ಷದಲ್ಲಿ ಯಾರೂ ರೆಬೆಲ್ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಉಪಚುನಾವಣೆಯಲ್ಲಿ ಯಾರೂ ರೇಬಲ್ ಇಲ್ಲ. ಝಮೀರ್ ಅಹ್ಮದ್, ನಝೀರ್ ಅಹ್ಮದ್, ಜಬ್ಬಾರ್, ಪೈಲ್ವಾನ್ ಉಸ್ತಾದ್ ಯಾರೇ ಇರಲಿ ಪಕ್ಷ ಹೇಳಿದಂತೆ ಅವರು ಕೇಳುತ್ತಾರೆ. ಎಲ್ಲರೂ ನಮ್ಮವರೇ, ಚುನಾವಣೆ ವೇಳೆ ಕೆಲ ಭಿನ್ನಾಭಿಪ್ರಾಯಗಳು ಸಹಜ. ಆದರೇ, ಎಲ್ಲರೂ ನಮ್ಮವರೇ, ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರಾಗಲಿ ಬೇರೆ ಯಾವ ಮತಗಳೇ ಆಗಲಿ ವಿಭಜನೆಯಾಗುವುದಿಲ್ಲ. ಶಿವಶಂಕರಪ್ಪನವರಿಗಿಂತ ಹೆಚ್ಚು ಲೀಡ್’ನಲ್ಲಿ ಸಮರ್ಥ ಗೆಲ್ಲುತ್ತಾರೆ. ದಾವಣಗೆರೆಗೆ ಶಿವಶಂಕರಪ್ಪನವರ ಕುಟುಂಬ ಇಡೀ ರಾಜ್ಯವೇ ನೋಡುವಂತಹ ಕೊಡುಗೆಯನ್ನು ನೀಡಿದ್ದಾರೆ. ಜನರು ಅದನ್ನ ಸ್ಮರಿಸುತ್ತಿದ್ದಾರೆ ಎಂದರು.

Tags:

error: Content is protected !!