Bagalkot

ಬಾಗಲಕೋಟೆಯಲ್ಲಿ ಇನ್ನು ಪೆಟ್ರೋಲ್’ಗಾಗಿ ಹಾಹಾಕಾರ: ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್; ವಾಹನ ಸವಾರರು ಕಂಗಾಲು!

Share

ಬಾಗಲಕೋಟೆ ನಗರದಲ್ಲಿ ಪೆಟ್ರೋಲ್ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದ್ದು, ಇಂಧನಕ್ಕಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ನಗರದ ಬಹುತೇಕ ಬಂಕ್‌ಗಳು ಖಾಲಿಯಾಗಿದ್ದು, ಲಭ್ಯವಿರುವ ಕಡೆಗಳಲ್ಲಿ ಕಟ್ಟುನಿಟ್ಟಿನ ಮಿತಿ ಹೇರಲಾಗಿದೆ.

ಕಳೆದ ಎರಡು ದಿನಗಳಿಂದ ನಗರದಲ್ಲಿ ಪೆಟ್ರೋಲ್ ಸರಬರಾಜು ಸಮರ್ಪಕವಾಗಿ ಆಗದ ಕಾರಣ ಇಂಧನ ಅಭಾವ ತಾರಕಕ್ಕೇರಿದೆ. ನಗರದ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್‌ಗಳು ರಾರಾಜಿಸುತ್ತಿದ್ದು, ಪೆಟ್ರೋಲ್ ಸಿಗದೆ ಸವಾರರು ಆತಂಕಗೊಂಡಿದ್ದಾರೆ. ಸದ್ಯಕ್ಕೆ ನಗರದಲ್ಲಿ ಡೀಸೆಲ್ ಮಾತ್ರ ಲಭ್ಯವಿದ್ದು, ಪೆಟ್ರೋಲ್ ವಾಹನಗಳು ರಸ್ತೆಯಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಪೂರೈಕೆಯ ಸರಪಳಿಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ನಗರದ ಜಿಯೋ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿದ್ದು, ಅಲ್ಲಿ ಭಾರೀ ಜನದಟ್ಟಣೆ ಕಂಡುಬರುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಎಲ್ಲರಿಗೂ ಇಂಧನ ಸಿಗುವಂತೆ ಮಾಡಲು ಬಂಕ್ ಮಾಲೀಕರು ಮಿತಿ ಹೇರಿದ್ದಾರೆ. ಒಬ್ಬರಿಗೆ ಗರಿಷ್ಠ 200 ರೂಪಾಯಿ ಮೊತ್ತದ ಪೆಟ್ರೋಲ್ ಮಾತ್ರ ನೀಡಲಾಗುತ್ತಿದ್ದು, ಡೀಸೆಲ್ ವಾಹನಗಳಿಗೆ 1,000 ರೂಪಾಯಿಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಅನಿವಾರ್ಯವಾಗಿ ಸವಾರರು ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಅಲ್ಪ ಪ್ರಮಾಣದ ಇಂಧನ ಪಡೆದು ವಾಪಸ್ಸಾಗುತ್ತಿದ್ದಾರೆ.

Tags:

error: Content is protected !!