BELAGAVI

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಸಂಗ್ರಹಣೆಯ ವಿಶೇಷ ಸಭೆ

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ತೆರಿಗೆ ಸಂಗ್ರಹಣದ ವಿಶೇಷ ಸಭೆಯಲ್ಲಿ ಅಧಿಕಾರಿಗಳನ್ನು ನಗರಸೇವಕರು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮಹಾಪೌರರು ಮತ್ತು ಆಯುಕ್ತರು ಹೆಚ್ಚಿನ ಕೌಶಲ್ಯದೊಂದಿಗೆ ತೆರಿಗೆ ಸಂಗ್ರಹಣಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು. ಮಹಾನಗರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏಪ್ರೀಲ್ 1 ರಿಂದ ವಿಶೇಷ ತಂತ್ರಾಶ ಜಾರಿಗೊಳಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಪ್ರೀತಿ ಕಾಮತ್ ಅವರ ಅಧ್ಯಕ್ಷತೆಯಲ್ಲಿ ತೆರಿಗೆ ಸಂಗ್ರಹಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಬೆಳಗಾವಿ ಮಹಾನಗರದ ಜನತೆ ಕರ ಪಾವತಿಸಲು ತಯಾರಾಗಿದ್ದಾರೆ. ಆದರೇ, ಕರ್ನಾಟಕ ವನ್ ಕೇಂದ್ರಗಳಲ್ಲಿ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಸಿಬ್ಬಂದಿಯ ಕೊರತೆ ಮತ್ತು ಇ.ಎಸ್.ಟಿ ಕಾಗದಪತ್ರಗಳ ಸಬೂಬು ಹೇಳಲಾಗುತ್ತಿದೆ ಎಂದು ನಗರಸೇವಕ ರವಿ ಸಾಳುಂಕೆ ಅವರು ಆರೋಪಿಸಿದರು. ಇದಕ್ಕೆ ಸದಸ್ಯ ಶಾಹೀದ್ ಖಾನ್ ಪಠಾಣ್ ಅವರು ಧ್ವನಿಗೂಡಿಸಿದರು.

ಇದಕ್ಕೆ ನಗರಸೇವಕ ಮುಝಮ್ಮಿಲ್ ಢೋಣಿ ಅವರು ತಾವೂ ಜೈಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯ 34 ಲಕ್ಷ ರೂಪಾಯಿ ಕೂಡ ಸ್ವೀಕರಿಸಲಿಲ್ಲ. ನಾವು ಕೊನೆಗೆ ಆನ್’ಲೈನ್ ಮೂಲಕ ಭರಿಸಿರುವುದಾಗಿ ತಿಳಿಸಿದರು. ಇದಕ್ಕ ಆಡಳಿತ ಪಕ್ಷದ ಸದಸ್ಯರು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇದಕ್ಕೆ ಕಂದಾಯ ಉಪಾಯುಕ್ತರು ಅದರ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆ ಅದರ ಕರವನ್ನು ಸ್ವೀಕರಿಸಿಲ್ಲ. ಅವರು ನೇರವಾಗಿ ತುಂಬಿದ್ದಾರೆ. ತಂತ್ರಾಂಶದಲ್ಲಿ ಈ ಕುರಿತು ಉಲ್ಲೇಖ ಮಾಡಬೇಕಿದೆ ಎಂದರು.

ಉಪಮಹಾಪೌರ ಹಣುಮಂತ ಕೊಂಗಾಲಿ ಅವರು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಪಾರದರ್ಶಕವಾಗಿ ಕೆಲಸವನ್ನು ನಿರ್ವಹಿಸಬೇಕು. ಇದಕ್ಕೆ ಪೂರಕವಾದ ಬೆಂಬಲವನ್ನು ನಾವು ನೀಡಲು ಸಿದ್ಧ ಎಂದರು.

ಮಾಜಿ ಮಹಾಪೌರ ಮಂಗೇಶ್ ಪವಾರ್ ಅವರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಜಾಗೆಗಳನ್ನು ಸರಿಯಾಗಿ ಅಳೆದು, ಅದರ ಕರವನ್ನು ಮಾಲೀಕರಿಗೆ ತಿಳಿಸುವ ಕೆಲಸವಾಗಬೇಕೆಂದರು.

ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಅವರು 19 ಕೋಟಿ ರೂಪಾಯಿ ತೆರಿಗೆ ಬಾಕಿಯಿದ್ದು, ಕೇವಲ ಶೇ. 70 ರಷ್ಟು ಮಾತ್ರ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಮಹತ್ವವನ್ನು ಅರಿತು ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಬೇಕು ಎಂದರು.

ಈ ವೇಳೆ ಮಾತನಾಡಿದ ಕಂದಾಯ ಉಪಾಯುಕ್ತ ಸಿದ್ಧು ಹುಲ್ಲೋಳ್ಳಿ ಅವರು, ಏಪ್ರೀಲ್ 1 ರಿಂದ ಬೆಳಗಾವಿ ಮಹಾನಗರದ ಜನರು ತಮ್ಮ ಆಸ್ತಿ ತೆರಿಗೆಯನ್ನು ಆನಲೈನ್ ಭರಿಸಲು ಇ-ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ವಿದ್ಯುತ್ ಬಿಲ್ ಮಾದರಿಯಲ್ಲಿ 3 ವಿಧವಾದ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಮೊಬೈಲ್’ಗೆ ಮೇಸೆಜ್ ಮೂಲಕ ಆಸ್ತಿ ಮಾಲೀಕರಿಗೆ ಮಾಹಿತಿಯನ್ನು ಒದಗಿಸಲಾಗುವುದು. ಇದು ಜನರ ಮತ್ತು ಮಹಾನಗರ ಪಾಲಿಕೆಯ ಕೆಲಸವನ್ನು ಸರಾಗವಾಗಿಸಲಾಗುವುದು.

ಪಾಲಿಕೆ ಕಂದಾಯ ಉಪ ಆಯುಕ್ತ ಸಿದ್ದು ಹುಲ್ಲೋಳ್ಳಿ ಮಾತನಾಡಿ ಪಾಲಿಕೆಯ ಅಧಿಕಾರಿಗಳಾದ ಧರ್ಮನಾಥ ಪೂರಿ, ಪರಶುರಾಮ ಮೇತ್ರಿ, ಲಕ್ಷ್ಮೀ ಪ್ರೀಯಾ, ಪ್ರಕಾಶ ಸೇಠ್ ಸನದಿ ಅವರಿಗೆ ಅಕ್ರಮ ಜಾಗವನ್ನು ಪಿಐಡಿ ಮಾಡಿದ್ದಾರೆ ಎನ್ನುವ ಆರೋಪ‌ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯ ಶಂಕರ ಪಾಟೀಲ್ ಮಾತನಾಡಿ, ಪಾಲಿಕೆಯ ಸದಸ್ಯರ ಪಿಐಡಿ ಮಾಡಲು ಯಡತಾಕಿಸುವ ಪಾಲಿಕೆ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಪಿಐಡಿ ಮಾಡಿಕೊಟ್ಟಿದ್ದಾರೆ. ಕೇವಲ ತಪ್ಪು ಮಾಡಿದ ಅಧಿಕಾರಿಗಳಿಗೆ ನೋಟಿಸ್ ನೀಡುವ ಬದಲು ನಕಲಿ ದಾಖಲೆ ಸಲ್ಲಿಸಿ ಪಿಐಡಿ ಮಾಡಿಸಿಕೊಂಡ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡಣೆಕರ, ಸದಸ್ಯೆ ರೇಖಾ ಹೂಗಾರ, ಉಪಾಯುಕ್ತರಾದ ಉದಯ್ ಕುಮಾರ್ ತಳವಾರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!