ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆಯ ವೇಳೆ ಇಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ಶಾಸಕ ಮುನಿರತ್ನ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಕಿದ ಸವಾಲು ಸದನದಲ್ಲಿ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷದ ಸದಸ್ಯರು ಮುನಿರತ್ನ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರ ನೀಡುತ್ತಿದ್ದಾಗ, ಶಾಸಕ ಮುನಿರತ್ನ ಅವರ ಗೂರಗುಂಟೇಪಾಳ್ಯ ಜಂಕ್ಷನ್ ಸಮಸ್ಯೆ ಕುರಿತು ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೇ, ದೇವಸ್ಥಾನದ ಜಮೀನು ಶಾಲೆಗೆ ನೀಡುವ ಬದಲೂ ಮೆಟ್ರೋಗೆ ನೀಡಬಾರದು ಎಂಬ ಕುರಿತು ಚರ್ಚೆ ಮಾಡಬೇಕೆಂದರು. ಆದರೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮಧ್ಯದಲ್ಲೇ ತಡೆಯಲು ಮುನಿರತ್ನ ಪ್ರಯತ್ನಿಸಿದರು. ಇದಕ್ಕೆ ಆಡಳಿತ ಸದಸ್ಯರು ಬೆಂಗಳೂರು ಬಗ್ಗೆ ಚರ್ಚಿಸಲು ಅವಕಾಶ ನೀಡಿದ ವೇಳೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಮುನಿರತ್ನ ಅವರು ಡಿಸಿಎಂ ಅವರಿಗೆ
ಆದರೇ, ಯೋಗ್ಯತೆ, ಧಮ್ಮು ತೋರಿಸಿ ಎಂದು ಹೇಳಿದರು. ಇದರಿಂದಾಗಿ ಸದನದಲ್ಲಿ ಸದ್ದು ಗದ್ದಲ ಉಂಟಾಯಿತು. ಆಡಳಿತ ಪಕ್ಷದ ಸದಸ್ಯರು ಮುನಿರತ್ನ ಅಮಾನತ್ತಿಗೆ ಆಗ್ರಹಿಸಿ, ಸದನದ ಭಾವಿಗಿಳಿಯಲು ಸಜ್ಜಾದರು.
ಇದಕ್ಕೆ ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ಆಡಳಿತ ಪಕ್ಷದ ನಾಯಕರು ಭಾವಿಗೆ ಇಳಿದು ಪ್ರತಿಭಟಿಸುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂದರು. ತಾವು ಡಿಸಿಎಂ ಆಗಿದ್ದೀರಿ. ಒಳ್ಳೆಯ ಉತ್ತರ ನೀಡಿದ್ದೀರಿ. ಕೇವಲ ಒಂದು ವಿಚಾರಕ್ಕೆ ವಿವಾದ ಬೇಡ. ಸಂಬಂಧಪಟ್ಟವರನ್ನು ಕರೆಯಿಸಿ ಅದನ್ನು ಮುಗಿಸಿ ಎಂದು ಸಭಾಪತಿಗಳಿಗೆ ತಿಳಿಸಿದರು. ಬೇಡವಾದದ್ದನ್ನು ಕಡತದಿಂದ ತೆಗೆದು ಹಾಕಿ ಎಂದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ವಿಪಕ್ಷಯರು ಪದೇ ಪದೇ ಈ ರೀತಿಯ ವರ್ತನೆ ಹೆಚ್ಚಾಗಿದ್ದು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಸಭಾಪತಿ ಯು.ಟಿ. ಖಾದರ್ ಅವರು ತಿಳಿ ಹೇಳಿ, ಕರ್ನಾಟಕದ ವಿಧಾನಸಭೆ ದೇಶದಲ್ಲೇ ಮಾದರಿಯಾಗಿದೆ. ಸಂಯಮ ಕಳೆದುಕೊಂಡು ಈ ರೀತಿಯ ವರ್ತನೆ ತೋರಬಾರದು ಎಂದರು.
