BELAGAVI

ಬೆಳಗಾವಿಯ ಏಕೈಕ ವಾಲ್ಮೀಕಿ ರಾಮ ಮಂದಿರದಲ್ಲಿ ರಾಮನವಮಿ ಸಂಭ್ರಮ: ಭಕ್ತರ ಸಾಗರ

Share

ಬೆಳಗಾವಿಯ ಶಹಾಪುರದಲ್ಲಿರುವ ನಗರದ ಏಕೈಕ ವಾಲ್ಮೀಕಿ ರಾಮ ಮಂದಿರದಲ್ಲಿ ಇಂದು ಶ್ರೀರಾಮ ನವಮಿಯನ್ನು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಆದಿಕವಿ ವಾಲ್ಮೀಕಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀರಾಮ ಜನ್ಮೋತ್ಸವದ ಸಡಗರ ಮನೆಮಾಡಿತ್ತು.
ಬೆಳಗಾವಿಯ ಶಹಾಪುರ ಚೌಕ್‌ನ ನಾಥ ಪೈ ವೃತ್ತದ ಸಮೀಪವಿರುವ ಆದಿಕವಿ ವಾಲ್ಮೀಕಿ ದೇವಸ್ಥಾನ ಟ್ರಸ್ಟ್‌ನ ವಾಲ್ಮೀಕಿ ರಾಮ ಮಂದಿರದಲ್ಲಿ ಗುರುವಾರ ರಾಮನವಮಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಗರ ಪ್ರದೇಶದಲ್ಲಿರುವ ಏಕೈಕ ವಾಲ್ಮೀಕಿ ರಾಮ ಮಂದಿರ ಇದಾಗಿದ್ದು, ಬೆಳಿಗ್ಗೆಯಿಂದಲೇ ಕಲ್ಲಪ್ಪ ಪೂಜಾರಿ ಅವರ ಪೌರೋಹಿತ್ಯದಲ್ಲಿ ಶ್ರೀರಾಮನಿಗೆ ವಿಶೇಷ ಅಭಿಷೇಕ, ಮಹಾಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗೋಧೋಳಿಯ ಬೆಟಗೇರಿ ಮಹಾರಾಜ್ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಪ್ರೋತ್ಸಾಹ ಫೌಂಡೇಶನ್ ಕಾರ್ಯದರ್ಶಿ ಸಂತೋಷ್ ಹೊನಗಲ್, ಮಧ್ಯವರ್ತಿ ಕುಸ್ತಿಗಿರಿ ಸಂಘದ ಹಿರಾಲಾಲ್ ಚವಾಣ್ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಚೌಗುಲೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಆಯೋಜಿಸಿದ್ದ ಮಹಾಪ್ರಸಾದ ವಿತರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಯಶಸ್ವಿಗಾಗಿ ಟ್ರಸ್ಟ್‌ನ ಕಾರ್ಯದರ್ಶಿ ಮಾರುತಿ ನಾಯ್ಕ್, ವ್ಯವಸ್ಥಾಪಕ ಮಹಾದೇವ ಶಹಾಪುರಕರ್, ರಾಜು ನಾಯ್ಕ್, ಅಶೋಕ್ ನಾಯ್ಕ್ ಮತ್ತು ಸಂಜಯ್ ಶಹಾಪುರಕರ್ ಶ್ರಮಿಸಿದರು.

Tags:

error: Content is protected !!