ಸಿಲಿಂಡರ್ ಕೊರತೆಯ ಸುಳ್ಳು ಸುದ್ದಿ ಹರಡಿಸುತ್ತಿರುವವರ ಸೇರಿ ಹೆಚ್ಚಿನ ದರಕ್ಕೆ ಸಿಲಿಂಡರ್ ಮಾರಾಟ ಮಾಡಯತ್ತಿರುವ ಏಜೆನ್ಸಿ ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು.
ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆಗಾಗಿ ಧ್ವನಿ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಿಲಿಂಡರ್ ವದಂತಿ ಸೇರಿ ಹೆಚ್ಚಿನ ದರ ಮಾರಾಟ ಮಾಡುವವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಮೂರು ದೇಗಳ ಯುದ್ಧದಿದಾಗಿ ಜಗತ್ತಿನಲ್ಲಿಯೇ ಕೆಲವು ಪೂರೈಕೆಯಲ್ಲಿ ವ್ಯತ್ಯಾಸವಾಗಿವೆ. ಈ ಸಮಯದಲ್ಲಿ ಭಾರತ ದೇಶದಲ್ಲಿ ಕಮರ್ಷಿಯಲ್ ಸಿಲಿಂಡರ್ನಲ್ಲಿ ಅಭಾವ ಬಗ್ಗೆ ಸರ್ಕಾರ ದೃಢಪಡಿಸಿದೆ. ಆದರೆ ಇದನ್ನೇ ಬಂಡಿವಾಳ ಮಾಡಿಕೊಂಡಿರುವ ಕೆಲವು ದುಷ್ಟ ಶಕ್ತಿಗಳು ತಮ್ಮ ಹಣದಾಸೆಗೆ ಹಾಗೂ ಜನರಲ್ಲಿ ಆತಂಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿವೆ. ಗೃಹ ಬಳಕೆ ಸಿಲಿಂಡರ್ ಸಿಗುತ್ತಿಲ್ಲ ಎಂಬ ಸುಳ್ಳು ಸುದ್ದಿ ವದಂತಿಗಳನ್ನು ಹರಡಿಸಲಾಗುತ್ತಿದೆ. ಜತೆಗೆ ಈ ವದಂತಿ ಬಂಡವಾಳ ಮಾಡಿಕೊಂಡ ಕೆಲವು ವ್ಯಕ್ತಿಗಳು ಹಾಗೂ ಏಜೆನ್ಸಿಗಳು ದುಡ್ಡ ಮಾಡಲು ಹೆಚ್ಚಿನದರ ವ್ಯಾಪಾರ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಾಗೂ ಹೆಚ್ಚಿನ ದರಕ್ಕೆ ಸಿಲಿಂಡರ್ ಮಾರಾಟ ಮಾಡುವ ವ್ಯಕ್ತಿ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಸರ್ಕಾರ ಜಿಲ್ಲಾಡಳಿತ ಕೈಗೊಳ್ಳುವಂತೆ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ಧ್ವನಿ ಸಂಘಟನೆ ಆಗ್ರಹಿಸಿತ್ತು.
