ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಸಹೋದರಿಯರ ಮೇಲೆ ಕಾರ್ ಹರಿದ ಪರಿಣಾಮ ಓರ್ವ ಸಹೋದರಿ ಸಾವನ್ನಪ್ಪಿದರೆ,ಇನ್ನೋರ್ವಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಈ ಘಟನೆಯು ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಶಾಲೆಯ ಮುಗಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಹೋದರಿಯ ಮೇಲೆ ಹರಿದ ಕಾರ್ ಹರಿದೆ. ಅಪಘಾತದಲ್ಲಿ ಓರ್ವ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದರೆ
ಮತ್ತೊರ್ವಳಿಗೆ ಗಂಭೀರ ಗಾಯವಾಗಿದೆ. ಜಯಶ್ರೀ ಕೋಟರೆ (11) ಮೃತ ದುರ್ದೈವಿ.ಸಹೋದರಿ ಭಾಗ್ಯಶ್ರೀ ಪರಿಸ್ಥಿತಿಯು ಚಿಂತಾಜನಕವಾಗಿದೆ.
ರಾಯಬಾಗ ತಾಲೂಕಿನ ಮೇಖಳಿ ಅನುದಾನಿತ ಸರಕಾರಿ ಶಾಲೆಗೆ ಸಹೋದರಿಯರು ಹೋಗುತ್ತಿದ್ದರು. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ.ಕಾರ್ ನಾಗರಮುನ್ನೋಳಿ ಗ್ರಾಮದಿಂದ ರಾಯಬಾಗ ಪಟ್ಟಣದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡದಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ, ರಾಯಬಾಗ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
