BELAGAVI

ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ರೂಪಕ ವಾಹನ ಸ್ಪರ್ಧೆ

Share

ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಬೆಳಗಾವಿಯ ಹೊಸೂರಿನಲ್ಲಿ ಆಯೋಜಿಸಲಾಗಿದ್ದ ರೂಪಕ ವಾಹನ ಅಲಂಕಾರ ಸ್ಪರ್ಧೆಯು ಗಮನ ಸೆಳೆಯಿತು. ನವಬೌದ್ಧ ಯುವಕ ಮಂಡಳ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ವಿವಿಧ ಭಾಗಗಳ ಕಲಾತ್ಮಕ ರೂಪಕಗಳು ಪಾಲ್ಗೊಂಡು ಜಯಂತಿಯ ಮೆರುಗನ್ನು ಹೆಚ್ಚಿಸಿದವು.

ಬೆಳಗಾವಿಯ ಹೊಸೂರ ನವಬೌದ್ಧ ಯುವಕ ಮಂಡಳ ಹಾಗೂ ವಿನೋದ ಮೋಹನ ಮ್ಯಾಗಿನಮನಿ ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅತ್ಯಂತ ಸಾರ್ಥಕವಾಗಿ ಆಚರಿಸಲಾಯಿತು. ಈ ಸಂಭ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ‘ರೂಪಕ ವಾಹನ ಅಲಂಕಾರ ಸ್ಪರ್ಧೆ’ಯಲ್ಲಿ, ಕಂಗ್ರಾಳಿ ಬಿ.ಕೆ. ಗ್ರಾಮದ ಅಂಬೇಡ್ಕರ್ ಗಲ್ಲಿಯ ‘ಜೈ ಭೀಮ್ ಯುವಕ ಮಂಡಳ’ ಅತ್ಯುತ್ತಮ ಕಲಾತ್ಮಕ ಅಲಂಕಾರ ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಸಂಘಟಕರಾದ ಸೂರಜ್ ಕಾಂಬಳೆ, ರಾಹುಲ್ ಕೋಲಕಾರ, ವಿನೋದ್ ಮ್ಯಾಗಿನಮನಿ, ಮಲ್ಲೇಶ ಚೌಗುಲೆ, ಸೂರಜ್ ಕಾಂಬಳೆ, ರಾಹುಲ್ ಕೋಲಕಾರಯುವರಾಜ್ ತಳವಾರ ಹಾಗೂ ಪ್ರಶಾಂತ್ ಪೂಜಾರಿ ಅವರ ಶ್ರಮದಿಂದ ಯಶಸ್ವಿಯಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ, ನವಬೌದ್ಧ ಯುವಕ ಮಂಡಳದ ಸದಸ್ಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂವಿಧಾನ ಶಿಲ್ಪಿಯ ಜಯಂತಿ ಉತ್ಸವಕ್ಕೆ ಕಳೆ ನೀಡಿದರು.

Tags:

error: Content is protected !!