ಬೆಳಗಾವಿಯ ಅಶೋಕನಗರದಲ್ಲಿರುವ ಮಹಾನಗರ ಪಾಲಿಕೆಯ ಉತ್ತರ ವಲಯ ಕಚೇರಿ ಈಗ ಸಾರ್ವಜನಿಕರ ಆಕ್ರೋಶದ ಕೇಂದ್ರಬಿಂದುವಾಗಿದೆ. ಇ-ಆಸ್ತಿ ಪ್ರಮಾಣ ಪತ್ರಕ್ಕಾಗಿ ತಿಂಗಳುಗಟ್ಟಲೆ ಅಲೆದಾಡಿ ಬೇಸತ್ತ ಕೈಗಾರಿಕೋದ್ಯಮಿಗಳು ಅಧಿಕಾರಿಗಳ ಪತ್ತೆಯೇ ಇಲ್ಲದ ಕಚೇರಿಯಲ್ಲಿ ಧರಣಿಗೆ ಕುಳಿತ ಘಟನೆ ನಡೆಯಿತು.
ಬೆಳಗಾವಿಯ ಅಶೋಕನಗರದಲ್ಲಿರುವ ಮಹಾನಗರ ಪಾಲಿಕೆಯ ಉತ್ತರ ವಲಯದ ಕಚೇರಿಯಲ್ಲಿ ಇ-ಆಸ್ತಿ ಪ್ರಮಾಣ ಪತ್ರ ವಿಳಂಬ ನೀತಿಗೆ ಬೇಸತ್ತ ಕೈಗಾರಿಕೋದ್ಯಮಿಗಳು ಮಹಾನಗರ ಪಾಲಿಕೆ ಕಚೇರಿಯಲ್ಲೇ ಧರಣಿಗೆ ಕುಳಿತ ಘಟನೆ ನಡೆಯಿತು. ಯಾವೊಬ್ಬ ಅಧಿಕಾರಿಯೂ ಕಾರ್ಯಾಲಯಕ್ಕೆ ಬಾರದಿರುವುದು ಜನಸಾಮಾನ್ಯರ ಆಕ್ರೋಶವನ್ನು ಹೆಚ್ಚಿಸಿತು.
ಹುಬ್ಬಳ್ಳಿ-ಧಾರವಾಡಕ್ಕಿಂತಲೂ ಬೆಳಗಾವಿ ಮಹಾನಗರ ಪಾಲಿಕೆಯ ನಿಯಮಗಳೇ ಬೇರೆಯಾಗಿವೆ. ಇ-ಆಸ್ತಿ ಮಾಡಿ ಕೊಡಲೂ ಹೆಚ್ಚಿನ ಹಣವನ್ನು ಕೇಳುತ್ತಿದ್ದಾರೆ. ಪರ್ಯಾಯವಿಲ್ಲದೇ ನೇಣು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಇ-ಆಸ್ತಿ ಪ್ರಮಾಣ ಪತ್ರ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೇ, ಅಧಿಕಾರಿಗಳ ಪತ್ತೆಯೇ ಇಲ್ಲ ಎಂದು ಜನ ಸಾಮಾನ್ಯರು ಆರೋಪಿಸಿದರು.
ಇ-ಸ್ವತ್ತಿಗಾಗಿ ಕಳೆದ 5-6 ತಿಂಗಳಿನಿಂದ ಓಡಾಡುತ್ತಿದ್ದೇವೆ. ಆದರೇ ಇಲ್ಲಿಯ ವರೆಗೂ ಕೆಲಸವಾಗುತ್ತಿಲ್ಲ. ರಾತ್ರಿ 11 ಗಂಟೆಯ ವರೆಗೆ ಇಲ್ಲಿಯೇ ಇರುತ್ತಿದ್ದೇವೆ. ಕಳೆದ 5 ದಿನಗಳಿಂದ ಪ್ರತಿದಿನ ಕಾರ್ಯಾಲಯಕ್ಕೆ ಬರುತ್ತಿದ್ದೇವೆ. ನೀಡಿದ ಯಾವುದೇ ಪ್ರಮಾಣಪತ್ರಗಳು ಇಲ್ಲ. ಏಜೆಂಟರು ಬಂದರೇ ಕೆಲಸ ಮಾಡಿಕೊಡುತ್ತಾರೆ. ಜನಸಾಮಾನ್ಯರ ಕೆಲಸನವನ್ನು ಸರಾಗವಾಗಿ ಮಾಡಿಕೊಡುತ್ತಿಲ್ಲ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳಿಗೆ ಇ-ಆಸ್ತಿಯನ್ನು ನೀಡಲು ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಇದರಿಂದಾಗಿ ಖರೀದಿ-ವಿಕ್ರಿ ಮಾಡಲು ತೊಂದರೆಯಾಗುತ್ತಿದೆ. ಶೇ. 5 ರಷ್ಟು ತೆರಿಗೆಯನ್ನು ಹೆಚ್ಚಿಸಿದ್ದು, ನಾಗರೀಕರ ಮೇಲೆ ಹೊರೆಯಾಗಿದೆ. ಅಶೋಕನಗರ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲವೆಂದು ಜನರು ಆರೋಪಿಸಿದರು.
ಆಟೋನಗರ ಕೈಗಾರಿಕಾ ಪ್ರದೇಶದ ಜನರ ಇ-ಆಸ್ತಿ ಮಾಡಿಕೊಡಲು ವಿಳಂಬವಾಗುತ್ತಿದೆ. ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇನ್ನು ಕಳೆದ ಬಾರಿ ಮಹಾನಗರ ಪಾಲಿಕೆಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಂತೆ ಅಧ್ಯಯಿಸಿ ಪ್ರಕ್ರಿಯೆ ಮಾಡುವುದಾಗಿ ಹೇಳಿ, ಪರಿಷತ್ತಿನಲ್ಲಿ ಠರಾವು ಪಾಸು ಮಾಡಿದ್ದಾರೆ. ಆದರೇ, ಇಲ್ಲಿಯ ವರೆಗೂ ಇದನ್ನ ಸರಾಗವಾಗಿ ಇ-ಆಸ್ತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
