ತಮ್ಮ ಜೀವನದ ಅಮೂಲ್ಯ ಸಮಯವನ್ನು ಸರ್ಕಾರಿ ಸೇವೆಗೆ ಮುಡಿಪಾಗಿಟ್ಟ ನಿವೃತ್ತ ನೌಕರರಿಗೆ ಈಗ ಪಿಂಚಣಿಯ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರವು ಬಜೆಟ್ನಲ್ಲಿ ಪಿಂಚಣಿ ಪರಿಷ್ಕರಣೆ ಕುರಿತು ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ, ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನಿವೃತ್ತ ನೌಕರರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ನಿವೃತ್ತ ನೌಕರ ಪಿಂಚಣಿಯನ್ನು ಕೇಂದ್ರ ಸರಕಾರ ಬಜೆಟ್ ನಲ್ಲಿ ಪರಿಷ್ಕರಿಸಿ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿರುವುದನ್ನು ಖಂಡಿಸಿ ಬುಧುವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಕೇಂದ್ರ ಸರಕಾರವು ಲೋಕಸಭೆಯಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ ಆರ್ಥಿಕ ಬಿಲ್ ನ್ನು ಮಂಡಿಸುವಾಗ 01-04-2025 ಕ್ಕೆ ಮೊದಲು ನಿವೃತ್ತಿಯಾದ ಸರಕಾರಿ ನೌಕರರಿಗೆ ಪಿಂಚಣಿ ಮತ್ತು ಕೌಟುಂಬಿಕ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂದು ನಿರ್ಣಯ ತೆಗೆದುಕೊಂಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಎಸ್.ಜಿ ಸಿದ್ನಾಳ್ ಅವರು ಒತ್ತಾಯಿಸಿದರು.
ಈ ಹಿಂದೆ 1972 ರಲ್ಲಿ ಆಗಿನ ಕೇಂದ್ರ ಸರಕಾರ ಪಿಂಚಣಿ ಸಲ್ಲಿಸುವುದಾಗಿ ತಿಳಿಸಿದ್ದರು ಆಗ ಸುಪ್ರಿಂ ಕೋರ್ಟ್ ವಕೀಲ ಡಿ.ಎಸ್. ನಕ್ಕರ್ 10 ವರ್ಷಗಳ ಕಾಲ ಹೋರಾಟ ಮಾಡಿ ಸರಕಾರದ ಕೊಡುವುದು ಭಿಕ್ಷೆಯಲ್ಲ ನಮ್ಮ ಹಕ್ಕು ಎಂದು ಪ್ರತಿ ಪಾದಣಿ ಮಾಡಿದರು. ಇದಕ್ಕೆ ಸುಪ್ರೀಂ ಕೋರ್ಟ್ ಮನ್ನಣೆ ನೀಡಿತ್ತು. ಈಗ ಏಕಾಏಕಿ ನಿವೃತ್ತ ನೌಕರರ ಪಿಂಚಣಿ ಹಣ ನಿಲ್ಲಿಸುವುದಾಗಿ ನಿರ್ಧಾರ ಮಾಡಿರುವುದನ್ನು ಹಿಂಪಡೆಯಬೇಕೆಂದು ಉಪಾಧ್ಯಕ್ಷರಾದ ಎಂ.ವಿ.ಹಿರೇಮಠ, ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀರುಪಾಕ್ಷಯ್ಯ ನೀರಲಗಿಮಠ, ಶಿವಪುತ್ರ ಗಂಗಾಪೂರ, ಕೆಂಪಣ್ಣಾ ಕೊಣ್ಣೂರ, ಸುಶೀಲಾ ರಜಪೂತ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
