ಇಸ್ರೇಲ್, ಅಮೇರಿಕಾ ಹಾಗೂ ಇರಾನ ಯುದ್ಧದಿಂದಾಗಿ ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಭಾರತ ಎದುರಿಸುತ್ತಿದ್ದು, ಇದರ ಮಧ್ಯ ಈಗ ಧಾರವಾಡದಲ್ಲಿ ವಾಹನಗಳ ಇಂಧನಕ್ಕೂ ಅಭಾವತೆ ಕಾಡುತ್ತಿದ್ದೇಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ರಾತ್ರೋ ರಾತ್ರಿ ಪೆಟ್ರೊಲ್ ಬಂಕ್ಗಳಲ್ಲಿ ವಾಹನ ಸೇರಿ ಕೈಯಲ್ಲಿ ಬಾಟ ಕ್ಯಾ ತಂದು ಪೆಟ್ರೋಲ್ ತುಂಬಿಸಿಕೊಳ್ಳಲು ಜನ ಹರಸಾಹಸ ಪಟ್ಟಿದ್ದಾರೆ.

ಹೌದು ಧಾರವಾಡ ರಾಯಾಪುರದ ಪೆಟ್ರೋಲ್ ಬಂಕ್ನಲ್ಲಿ ರಾತ್ರಿ ಮಳೆಯ ನಡುವೆಯೂ ಜನ ತಮ್ಮ ವಾಹನ ಅಷ್ಟೇ ಅಲ್ಲದೇ ಕ್ಯಾನ್ ಬಾಟಲ್ ಹಿಡಿದುಕೊಂಡು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮನ್ಯವಾಗಿತ್ತು. ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಅಭವಾತೆಯನ್ನು ಸರ್ಕಾರವೇ ಹೇಳಿದ್ದು, ಈಗ ವಾಹನಗಳ ಇಂಧನ ಬಗ್ಗೆ ಸೃಷ್ಟಿಯಾಗಿರುವ ವದಂತಿ ಬಗ್ಗೆ ಸರ್ಕಾರ ಅಥವಾ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಜನ ಈಗಾಗಲೇ ತೈಲ್ ಕೊರತೆ ಆತಂಕದಿಂದಾಗಿ, ಪೆಟ್ರೋಲ್ ಬಂಕ್ಗಳಿಗೆ ಸರದಿ ಸಾಲು ಹಚ್ಚಿ ನಿಲುತ್ತಿದ್ದಾವೆ. ಅಷ್ಟೇ ಅಲ್ಲದೇ 2 ಲೀಟರ್ ಬಾಟಲ್ ಜತೆಗೆ 20 ಲೀಟರ್ ವಾಟರ್ ಟ್ಯಾಂಕ್ ಹಿಡಿದು ಜನ ಬಂಕ್ಗಳಿಗೆ ಬರುತ್ತಿದ್ದು ಬಾಟಲ್ಗಳ ತುಂಬಿಸಿಕೊಂಡು ಹೋಗುತ್ತಿದ್ದಾರೆ. ನಾಳೆ ಪೆಟ್ರೋಲ್ ಡಿಸೇಲ್ ಸಿಗುತ್ತೋ ಇಲ್ವೋ ಎಂಬ ವದಂತಿಯಲ್ಲಿ ಜನ ಆತಂಕ ಮನೆ ಮಾಡಿದೆ.
