Dharwad

ಧಾರವಾಡದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ನೂಕ್ಕು ನುಗ್ಗಲು ವಿಚಾರ.

Share

ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಎದುರಾಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರು ಸ್ಪಷ್ಟಪಡಿಸಿದ್ದಾರೆ.

ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ನೂಕ್ಕು ನುಗ್ಗಲು ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ 60-65 ಕೆಎಲ್ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವಾಗುತ್ತಿತ್ತು. ಸುಳ್ಳು ಸುದ್ದಿ ಹಬ್ಬಿದ್ದರಿಂದ ಅಕ್ಕಪಕ್ಕದ ಜಿಲ್ಲೆಯ ಜನರೂ ಧಾರವಾಡಕ್ಕೆ ಬಂದು ಇಂಧನ ಒಯ್ಯುತ್ತಿರುವುದರಿಂದ ಪ್ರತಿನಿತ್ಯ ಈಗ 100-110 ಕೆಎಲ್ ಇಂಧನ ಮಾರಾಟವಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಇಂಧನ ಲಭ್ಯವಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗದೇ ಪೆಟ್ರೋಲ್ ಬಂಕ್ ಎದುರು ಕ್ಯೂ ನಿಲ್ಲುವುದು ಬೇಡ. ಕೆಲ ಪೆಟ್ರೋಲ್ ಬಂಕ್ ಮಾಲೀಕರು ತಮಗಾಗುತ್ತಿರುವ ಒತ್ತಡದಿಂದ ಬಂಕ್‌ಗಳನ್ನು ಬಂದ್ ಮಾಡಿರಬಹುದು. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿಯಾಗುತ್ತಿದ್ದಂತೆ ಅವುಗಳಿಗೆ ಮತ್ತೆ ರಿಫಿಲ್ ಮಾಡಲಾಗುತ್ತದೆ. ಯಾರೂ ಬಂಕ್‌ಗಳ ಎದುರು ಜಮಾಯಿಸಬಾರದು. ಸಾರ್ವಜನಿಕರು ಆತಂಕಪಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!