Khanapur

ಖಾನಾಪುರ: ಹಿರೇ ಅಂಗ್ರೋಳ್ಳಿ-ಗಂದಿಗವಾಡ ರಸ್ತೆ ಫುಲ್ ಡ್ಯಾಮೇಜ್; ಅಧಿಕಾರಿಗಳ ವಿರುದ್ಧ ಗಡಿನಾಡು ಹಿತರಕ್ಷಣಾ ವೇದಿಕೆ ಆಕ್ರೋಶ!

Share

ಖಾನಾಪುರ ತಾಲೂಕಿನ ಪೂರ್ವ ಭಾಗದ ಮುಖ್ಯರಸ್ತೆಯೊಂದು ಇಂದು ನರಕ ಸದೃಶ್ಯವಾಗಿ ಮಾರ್ಪಟ್ಟಿದೆ. ಹಿರೇ ಅಂಗರಹಳ್ಳಿಯಿಂದ ಗಂದಿಗವಾಡದವರೆಗೆ ಸಂಚರಿಸುವ ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾನಾಪುರ ತಾಲೂಕಿನ ಗಂದಿಗವಾಡ ಮತ್ತು ಮುಗಳಿಹಾಳ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರ ಪಾಲಿಗೆ ಸಂಚಕಾರವಾಗಿ ಪರಿಣಮಿಸಿದೆ. ಹಿರೇ ಅಂಗರಹಳ್ಳಿಯಿಂದ ಗಂದಿಗವಾಡದವರೆಗಿನ ರಸ್ತೆಯುದ್ದಕ್ಕೂ ಬೃಹತ್ ತಗ್ಗು-ಗುಂಡಿಗಳು ಬಿದ್ದಿದ್ದು, ಬೆಣಚು ಕಲ್ಲುಗಳು ಎದ್ದು ಕಾಣುತ್ತಿವೆ. ಈ ಭಾಗದ ನೂರಾರು ವಾಹನಗಳು ದಿನನಿತ್ಯ ಸಂಚರಿಸುವ ಈ ರಸ್ತೆಯಲ್ಲಿ ಪ್ರಯಾಣಿಸುವುದು ಈಗ ಸಾವು-ಬದುಕಿನ ಹೋರಾಟದಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಜೀಬಾಯಿ ಹಾಗೂ ನೇಗಿಲ ಯೋಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ್ ಅವರು, ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ಒಮ್ಮೆಯಾದರೂ ಈ ರಸ್ತೆಯಲ್ಲಿ ಸಂಚರಿಸಿ ಜನರ ಕಷ್ಟವನ್ನು ಆಲಿಸಬೇಕಿದೆ. ಒಂದು ವೇಳೆ ತಕ್ಷಣವೇ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!