ಬೆಳಗಾವಿ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಹಾಗೂ ಕಸ ವಿಲೇವಾರಿ ಶುಲ್ಕ ಏರಿಕೆ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾಜಿ ನಗರಸೇವಕ ವಿನಾಯಕ ಗುಂಜಟಕರ ನೇತೃತ್ವದಲ್ಲಿ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ತೆರಿಗೆ ಏರಿಕೆ ಕೈಬಿಡದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.

ಮಹಾನಗರ ಪಾಲಿಕೆಯು 2026-27ನೇ ಸಾಲಿಗೆ ಶೇ. 3ರಷ್ಟು ಆಸ್ತಿ ತೆರಿಗೆ ಏರಿಕೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ಅನಗೋಳದ ನಿವಾಸಿಗಳು ಹಾಗೂ ವರ್ತಕರು ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಕುರಿತಾದ ಮನವಿಯನ್ನು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರಿಗೆ ಸಲ್ಲಿಸಲಾಯಿತು.
ಮಾಜಿ ನಗರಸೇವಕ ವಿನಾಯಕ ಗುಂಜಟಕರ ಅವರು ಕಳೆದ ಬಾರಿ ಕಸ ವಿಲೇವಾರಿಗೆ ಹೆಚ್ಚಿನ ತೆರಿಗೆಯನ್ನು ವ್ಯಾಪಾರಿಗಳಿಂದ ಪಡೆಯುತ್ತಿದ್ದು, ಈಗ ಮತ್ತೇ ತೆರಿಗೆಯನ್ನು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಡುವೆ ತೆರಿಗೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೆರಿಗೆ ಭರಿಸದ ವ್ಯಾಪಾರಿಗಳ ವ್ಯಾಪಾರ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಕೂಡಲೇ ಹೆಚ್ಚಿನ ತೆರಿಗೆಯನ್ನು ಕಡಿತಗೊಳಿಸದಿದ್ದರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಜನರ ಸಮಸ್ಯೆಗಳನ್ನು ಪರಿಹರಿಸಿ ಜನರ ಧ್ವನಿ ಹಾಗೂ ಬಗದಲ್ಲೂ ಮಹಾನಗರ ಪಾಲಿಕೆ ಪರಿಷತ್ ಸದಸ್ಯರು ವರ್ಷಕ್ಕೊಮ್ಮೆ ಟ್ಯಾಕ್ಸ್ ಹೆಚ್ಚಿಸುತ್ತಿದ್ದು ಜನರ ಮೇಲೆ ಹೊರೆಯಾಗುತ್ತಿದೆ ಎಂದು ನಾಗರಿಕರು ಆರೋಪಿಸಿದರು.
ಇನ್ನು ರಾಜು ಪವಾರ್ ಅವರು ನಾಲ್ಕನೇ ರೈಲ್ವೆ ಗೇಟ್ ಕಾಮಗಾರಿ ಆರಂಭವಾಗಿದ್ದು ಜನ ಸಂಚಾರ ಕಡಿಮೆಯಾಗಿದೆ. ಇದರ ಪರಿಣಾಮ ವ್ಯಾಪಾರ ವ್ಯವಹಾರಗಳ ಮೇಲೆ ಬೀಳುತ್ತಿದ್ದು ಇಂತಹ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸುವುದು ಸರಿಯಲ್ಲ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಶಿವಾನಂದ್ ಮಲಗಾನ್ ಅವರು ಮಾತನಾಡಿ ಮಹಾನಗರ ಪಾಲಿಕೆಯ ನೀತಿಯನ್ನ ಖಂಡಿಸಿದರು.
