ಬೆಳಗಾವಿ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಮೇಯರ್ ಪ್ರೀತಿ ಕಾಮಕರ ಮತ್ತು ಉಪಮೇಯರ್ ಹನುಮಂತ ಕೊಂಗಾಲಿ ಅವರು ಮಂಗಳವಾರ ಬೆಳಗಾವಿ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದವರಿಗೆ ಆಶೀರ್ವದಿಸಿ ಬೆಳಗಾವಿ ನಗರ ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು. ರಾಜ್ಯದ ಎರಡನೇ ರಾಜಧಾನಿ ಎಂದು ಖ್ಯಾತಿ ಹೊಂದಿರುವ ಬೆಳಗಾವಿ ನಗರವನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಶ್ರೀಗಳು ಸಲಹೆ ನೀಡಿದರು.
ಪ್ರತಿಯೊಂದು ವಾರ್ಡುಗಳಿಗೆ ನೀವೆ ಹೋಗಿ ಜನರ ಸಮಸ್ಯೆಯ ಪರಿಹಾರವನ್ನು ಹುಡುಕುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಪ್ರೀತಿ ಕಾಮಕಾರ, ನಮ್ಮ ಪಕ್ಷದ ಹಿರಿಯರ ಆಶೀರ್ವಾದ ಮೇಯರ್ ಸ್ಥಾನ ಒಲಿದು ಬಂದಿದೆ. ಜನ ಸಾಮಾನ್ಯರ ಸೇವೆಯನ್ನು ಮಾಡಿ ಬೆಳಗಾವಿ ನಗರವನ್ನು ಮಾದರಿ ನಗರನ್ನಾಗಿ ಮಾಡುತ್ತೇವೆ ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಹುಕ್ಕೇರಿ ಶ್ರೀಗಳ ಆಶೀರ್ವಾದ ನಮಗೆ ಮೊದಲಿನಿಂದಲೂ ಇದೆ. ಇವತ್ತು ಅವರು ಗುರುಸ್ಥಾನದಿಂದ ಮಾಡಿರುವ ಆದೇಶವನ್ನು ತಪ್ಪದೆ ಮಾಡುತ್ತೇವೆ ಎಂದರು.
ವಿನಾಕಯ ಕಾಮಕಾರ, ಮಹಾಂತೇಶ ಶಾಸ್ತ್ರೀಗಳು ಉಪಸ್ಥಿತರಿದ್ದರು.
