BELAGAVI

74ರ ಹರೆಯದಲ್ಲೂ ಅಂತರಾಷ್ಟ್ರೀಯ ಓಟದ ಸಾಧನೆ: ಬೆಳಗಾವಿಯ ಕಿರೀಟಕ್ಕೆ ಸುರೇಶ್ ದೇವರಮನಿ ಗೌರವದ ಗರಿ

Share

ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಬೆಳಗಾವಿಯ 74 ವರ್ಷದ ಹಿರಿಯ ಕ್ರೀಡಾಪಟು ಸುರೇಶ್ ಲಕ್ಷ್ಮಣ್ ದೇವರಮನಿ ಸಾಬೀತುಪಡಿಸಿದ್ದಾರೆ. 2025-26ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಓಟದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಇವರನ್ನು ಸರ್ಕಾರಿ ಇಲಾಖೆಗಳು ಜಂಟಿಯಾಗಿ ಸತ್ಕರಿಸಿವೆ.

2025-26ನೇ ಸಾಲಿನ ಕ್ರೀಡಾಕೂಟ ಮತ್ತು ರ್ಯಾಲಿಗಳ ಆಯೋಜನೆ ಹಾಗೂ ಯುವ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯಡಿ, ಬೆಳಗಾವಿಯ ಹಿರಿಯ ಅಂತರಾಷ್ಟ್ರೀಯ ರನ್ನರ್ ಸುರೇಶ್ ಲಕ್ಷ್ಮಣ್ ದೇವರಮನಿ ಅವರನ್ನು ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಅದ್ಭುತ ಸಾಧನೆಗೈದ 74 ವರ್ಷದ ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 10 ಸಾವಿರ ರೂಪಾಯಿಗಳ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಈ ಸನ್ಮಾನವು ಜಿಲ್ಲೆಯ ಕ್ರೀಡಾ ಪ್ರೇಮಿಗಳಲ್ಲಿ ಸಂತಸ ಮೂಡಿಸಿದ್ದು, ಹಿರಿಯ ವಯಸ್ಸಿನಲ್ಲೂ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಸುರೇಶ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

Tags:

error: Content is protected !!