Chikkodi

ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 14 ಕೋಟಿ 48 ಲಕ್ಷ ರೂ ಅನುದಾನ:ಶಾಸಕ ಗಣೇಶ ಹುಕ್ಕೇರಿ

Share

ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ವಾರ್ಡಗಳಲ್ಲಿ ರಸ್ತೆ, ಚರಂಡಿ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಕಾಮಗಾರಿಗಳನ್ನು ಕೈಕೊಳ್ಳಲು ಸರ್ಕಾರದಿಂದ 14 ಕೋಟಿ 48 ಲಕ್ಷಗಳ ಅನುದಾನ ಮಂಜೂರಾತಿ ಮಾಡಿಸಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಝಾರಿ ಗಲ್ಲಿ, ವಿಠ್ಠಲ ದಾಮೋದರ ನಗರ, ಆರ್.ಕೆ ಕ್ವಾಲನಿ, ಸಾಯಿ ಮಂದರಿ, ಹುಡೋಕೊ ಕ್ವಾಲನಿ, ಬಸವೇಶ್ವರ ನಗರದಲ್ಲಿ ಸುಮಾರು ರೂ. 3 ಕೋಟಿ ಅನುದಾನದಲ್ಲಿ ಮಂಜೂರಾದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು ಚಿಕ್ಕೋಡಿ ಪಟ್ಟಣದ ಅಭಿವೃದ್ಧಿಗೆ ನಾನು ಹಾಗೂ ವಿಧಾನ ಪರಿಷತ ಹಾಗೂ ಕರ್ನಾಟಕ ಸರ್ಕಾರದ ನವದೇಹಲಿಯ ವಿಶೇಷ ಪ್ರತಿನಿಧಿಯಾದ ಪ್ರಕಾಶ ಹುಕ್ಕೇರಿ ಇವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದಲ್ಲಿ ಸಾರ್ವಜನಿಕರ ಹಾಗೂ ವಾರ್ಡ ಸದಸ್ಯರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಕೊಳ್ಳಲು ಅನುದಾನ ಮಂಜೂರಾತಿ ಮಾಡಲು ಕೋರಿದ ಪ್ರಯುಕ್ತ ಸರ್ಕಾರದಿಂದ ರೂ. 14 ಕೋಟಿ 48 ಲಕ್ಷ ಅನುದಾನ ಮಂಜೂರಾತಿ ಪಡೆದುಕೊಂಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಚಿಕ್ಕೋಡಿ ಪಟ್ಟಣದ ವಾರ್ಡ ನಂ 4 ರಲ್ಲಿ ಬರುವ ಸಾವರ್ಕರ ನಗರದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ರೂ. 57.00 ಲಕ್ಷ, ವಾರ್ಡ ನಂ 13 ಮತ್ತು 21 ರಲ್ಲಿ ಬರುವ ಹಾಲಟ್ಟಿ ಮತ್ತು ಗಣೇಶ ನಗರದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ರೂ. 67.00 ಲಕ್ಷ, ವಾರ್ಡ ನಂ 22 ರಲ್ಲಿ ಬರುವ ಹರಿ ನಗರ ಮತ್ತು ಮಹಾವೀರ ನಗರದಲ್ಲಿ ರಸ್ತೆ ಕಾಮಗಾರಿಗೆ ರೂ. 54 ಲಕ್ಷ ರೂಪಾಯಿ ವಾರ್ಡ ನಂ 22 ರಲ್ಲಿ ಬರುವ ಹೊಸ ಪುರಸಭೆ ಕಾರ್ಯಾಲಯದ ಹತ್ತಿರ ಮತ್ತು ಕವಟಗಿಮಠ ನಗರದಲ್ಲಿ ರಸ್ತೆ ಕಾಮಗಾರಿಗೆ ರೂ. 63.00 ಲಕ್ಷ, ವಾರ್ಡ ನಂ 4 ರಲ್ಲಿ ಬರುವ ಹೊಸಪೇಟ ಗಲ್ಲಿ, ಜಾರಿ ಗಲ್ಲಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ರೂ. 21.00 ಲಕ್ಷ, ಹಾಗೂ ವಾರ್ಡ ನಂ 18 ಮತ್ತು 21 ರಲ್ಲಿ ಬರುವ ಭೀಮ ನಗರದಲ್ಲಿ ರಸ್ತೆ, ಚರಂಡಿ ಕಾಮಗಾರಿಗಾಗಿ ರೂ. 50.00 ಲಕ್ಷ ಮಂಜೂರಾಗಿವೆ.

ಅದೇ ರೀತಿ ಚಿಕ್ಕೋಡಿ ಪಟ್ಟಣದ ಪ್ರಮುಖ ಬಸವೇಶ್ವರ ವೃತ್ತದಲ್ಲಿ ಪುಟಪಾತ, ಟ್ರಾಪಿಕ ಸಿಗ್ನಲ ಹಾಗೂ ವಿದ್ಯುತ್ ಬೀದಿ ದೀಪ ಅಳವಡಿಸಲು ರೂ. 4.87 ಕೋಟಿ, ಹಾಗೂ ಚಿಕ್ಕೋಡಿ ಪಟ್ಟಣದ ಬಸ ನಿಲ್ದಾಣದಿಂದ ಹಳೆ ಪುರಸಭೆ ಕಾರ್ಯಾಲಯದವರೆಗೆ ಹಾಗೂ ಕೆ.ಸಿ ರಸ್ತೆಯಿಂದ ಮುದೋಳ ನಿಪ್ಪಾಣಿ ರಸ್ತೆಯವರೆಗೆ, ಪುಟಪಾತ ರಸ್ತೆ ಹಾಗೂ ವಿದ್ಯುತ್ ಕಾಮಗಾರಿಗಳಿಗೆ ರೂ. 2.00 ಕೋಟಿ ಅನುದಾನ ಮಂಜೂರಾತಿ ಪಡೆಯಲಾಗಿದ್ದು ಶಿಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರಾಮಾ ಮಾನೆ, ಪ್ರಭಾಕರ ಕೋರೆ, ನರೇಂದ್ರ ನೇರ್ಲೆಕರ, ಹಾಗೂ ಮಾಜಿ ಸದಸ್ಯರಾದ ಶಾಮ ರೇವಡೆ, ಗುಲಾಬ ಬಾಗವಾನ, ಅನೀಲ ಮಾನೆ, ಸಾಬೀರ ಜಮಾದಾರ, ವರ್ದಮಾನ ಸದಲಗೆ, ಪ್ರವೀಣ ಕಾಂಬಳೆ, ಸಂತೋಷ ಜೋಗಳೆ, ವಿಶ್ವನಾಥ ಕಾಮಗೌಡ, ಅಜಯ ಕವಟಗಿಮಠ, ಸತೀಶ ಕುಲಕರ್ಣಿ, ಚಿದಾನಂದ ನವಲಿಹಾಳ, ಸಂದೀಪ ಶೇರಖಾನೆ, ರುಪೇಶ ನೂಲಿ, ಸುರೇಶ ಕಾಳಿಂಗೆ, ಫಿರೋಜ್ ಕಲಾವಂತ,ವಿಶಾಲ ಶಿಂಧೆ,ಮುಖ್ಯಾಧಿಕಾರಿ ಜಗದೀಶ ಈಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!