ರಾಜ್ಯದಲ್ಲಿ ತೀವ್ರಗೊಂಡಿದ್ದ ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವ ನೀಗಿಸಲು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಹತ್ವದ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದ ಬೆನ್ನಲ್ಲೇ ಸ್ಪಂದನೆ ದೊರೆತಿದ್ದು, ಇನ್ಮುಂದೆ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಸಿಲಿಂಡರ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕಮರ್ಷಿಯಲ್ ಸಿಲಿಂಡರಗಳ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈದೀಗ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಆಹಾರ್ ಮತ್ತು ನಾಗರೀಕ ಸರಬರಾಜು ನಿಗಮದ ಕಚೇರಿಯಲ್ಲಿ ಸಿಲಿಂಡರ್ ವಿತರಣಾ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದಾರೆ. ಇದರಲ್ಲಿ ಐಓಸಿ, ಎಚ್.ಪಿ. ಗೇಲ್, ಭಾರತ್ ಪೆಟ್ರೋಲಿಯಂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು. ಕಮರ್ಷಿಯಲ್ ಸಿಲಿಂಡರ್ ಉಪಯೋಗಿಸುವ ಹೋಟೆಲ್ ಮಾಲೀಕರು ಗೇಲ್ ಕಂಪನಿಯಲ್ಲಿ 1 ವಾರದೊಳಗೆ ನೋಂದಣಿಯನ್ನು ಮಾಡಿಸಬೇಕು. ದಾಖಲೆಯಿಲ್ಲದೇ ಸಿಲಿಂಡರ್ ನೀಡಲ್ಲ. ಕೇಂದ್ರ ಸರ್ಕಾರ ಕಾಳಸಂತೆಯ ವ್ಯವಹಾರವನ್ನು ತಡೆಯಲು ಈ ನಿಯಮವನ್ನು ಮಾಡಿದೆ. ರಾಜ್ಯಕ್ಕೆ ನಿತ್ಯ 10 ಸಾವಿರ ಸಿಲಿಂಡರ್ ಕೇಂದ್ರ ಸರ್ಕಾರ ನೀಡಲಿದೆ. ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯನವರು 2ನೇ ಬಾರಿ ಪತ್ರ ಬರೆದ ಬಳಿಕ ಸ್ಪಂದನೆ ದೊರೆತಿದೆ. ಶೇ. 20 ರಷ್ಟು ಹೆಚ್ಚುವರಿ ಸಿಲಿಂಡರ ನೀಡಲೂ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ಸೂಚಿಸಿದೆ. ನಗರ ಪ್ರದೇಶಕ್ಕೆ 25 ದಿನಕ್ಕೊಂದು ಮತ್ತು ಗ್ರಾಮಾಂತರದಲ್ಲಿ 45 ದಿನಕ್ಕೊಂದು ಸಿಲಿಂಡರ್ ವಿತರಿಸಲಾಗುವುದು. ವಿನಾಃಕಾರಣ ವಿತರಕರ ಮೇಲೆ ಒತ್ತಡ ತರುವ ಕೆಲಸವನ್ನು ಮಾಡಬಾರದು. ಬಯೋಗ್ಯಾಸ್ ಮತ್ತು ಇತರ ಮೂಲಗಳನ್ನು ಬಳಸಿ ಸ್ವಂತ ಕಾಲ ಮೇಲೆ ತಾವು ನಿಂತರೇ ಬೇರೆಯವರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
