State

ಅನ್ನಭಾಗ್ಯಕ್ಕೆ ಸಿಸಿಟಿವಿ ಕಣ್ಗಾವಲು: ಕಾಳಸಂತೆ ತಡೆಗೆ ಮುನಿಯಪ್ಪ ಹೊಸ ಪ್ಲಾನ್!

Share

ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆಯೇ? ವಿಧಾನ ಪರಿಷತ್ತಿನಲ್ಲಿ ಸದಸ್ಯ ಟಿ.ಎ. ಶರವಣ ಅವರು ಎತ್ತಿದ ಈ ಪ್ರಶ್ನೆಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಭರ್ಜರಿ ಉತ್ತರವನ್ನೇ ನೀಡಿದ್ದಾರೆ. ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳವರೆಗೆ ಹೈಟೆಕ್ ಕಣ್ಗಾವಲು ಇಡಲು ಸರ್ಕಾರ ಸಜ್ಜಾಗಿದೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಟಿ.ಎ. ಶರವಣ ಅವರು ಬಡವರ ಹಸಿವು ನೀಗಿಲು ಅನ್ನಭಾಗ್ಯ ತಂದಿರುವ ಸರ್ಕಾರ ರಾಜ್ಯದ ನ್ಯಾಯ ಬೆಲೆ ಅಂಗಡಿಗಳಲ್ಲಿ ಮತ್ತು ಗೋದಾಮುಗಳಲ್ಲಿ ಸಿಸಿಟ್ಹಿವಿ ಅಳವಡಿಸಿ ಅಕ್ರಮವನ್ನು ಯಾಕೆ ತಡೆಯುತ್ತಿಲ್ಲವೆಂದು ಪ್ರಶ್ನಿಸಿದರು. ಸರ್ಕಾರದ ಆದೇಶವಿದ್ದರೂ ಸಿಸಿಟ್ಹಿವಿ ಮತ್ತು ವೇ ಬ್ರಿಜ್ ಯಾಕೆ ಇಲ್ಲ. ಯಾವುದೇ ಅಕ್ಕಿಯನ್ನು ಸಾಗಾಟ ಮಾಡುವ ವಾಹನಗಳಿಗೆ ಹಳದಿ ಬಣ್ಣ ಹೊಂದಿರಬೇಕೆಂದು ನಿಯಮವಿದೆ. ಆದರೇ ಅಧಿಕಾರಿಗಳು ಮತ್ತು ಕಾಳಸಂತೆಯವರು ಇದರಲ್ಲಿ ಒಪ್ಪಂದ ಮಾಡಿಕೊಂಡಿವೆ. ನೇರವಾಗಿ ರೈಸ್ ಮಿಲ್ಲಿಗೆ ಹೋಗುತ್ತಿವೆ ಎಂದು ಆರೋಪಿಸಿದರು.

ಇದಕ್ಕೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಈಗಾಗಲೇ ರಾಜ್ಯದ 20 ಸಾವಿರ ನ್ಯಾಯ ಬೆಲೆ ಅಂಗಡಿಗಳಿಗೆ ಸಿಸಿಟ್ಹಿವಿ ಅಳವಡಿಕೆಗೆ ಚಿಂತನೆ ನಡೆದಿದೆ. ಅಕ್ಕಿ ಸಾಗಾಟದ ವಾಹನಗಳಿಗೆ ಜಿಪಿಎಸ್ ಹಾಕಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೇ ರಾಜ್ಯದಲ್ಲೆಡೆ ನಿಗಾವಹಿಸಲು ಬೆಂಗಳೂರಿನಲ್ಲಿ ಸಿಸಿಟ್ಹಿವಿ ಕಮಾಂಡ್ ಕಂಟ್ರೋಲ್ ಸೇಂಟರ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಕಾಳಸಂತೆಗೆ ಕಾಳುಗಳನ್ನು ಸಾಗಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದರು.

Tags:

error: Content is protected !!