Belagavi

ಬೆಳಗಾವಿಯಲ್ಲಿ ಡಾ.ಅಂಬೇಡ್ಕರ್’ರ 135ನೇ ಜಯಂತ್ಯೋತ್ಸವದ ಅಬ್ಬರ: ಮಲ್ಲೇಶ ಚೌಗುಲೆ ಅಧ್ಯಕ್ಷತೆಯಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳ ಹಬ್ಬ!

Share

ವಿಶ್ವದ ಗಮನ ಸೆಳೆದಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗುತ್ತಿದೆ. ಮಲ್ಲೇಶ ಚೌಗುಲೆ ಅವರ ಅಧ್ಯಕ್ಷತೆಯಲ್ಲಿ ಈ ಬಾರಿ ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ವರ್ಷಪೂರ್ತಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಹಾಮಂಡಳ ನಿರ್ಧರಿಸಿದೆ.

ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಬೃಹತ್ ಮಹಾಮಂಡಳವನ್ನು ರಚಿಸಲಾಗಿದೆ. ಮಲ್ಲೇಶ ಚೌಗುಲೆ ಅವರನ್ನು ಮಹಾಮಂಡಳದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ರಾಜು ಕಲ್ಲೇನ್ನವರ, ಮನೋಜ್ ಹಿತ್ತಲಮನಿ, ಮತ್ತು ಸಂತೋಷ್ ಕಾಂಬಳೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಾರ್ಯದರ್ಶಿಗಳಾಗಿ ಆಕಾಶ ಹಲಗೇಕರ ಹಾಗೂ ಆನಂದ ಕೋಲಕಾರ ನೇಮಕಗೊಂಡಿದ್ದಾರೆ. ಜೊತೆಗೆ ಉಪಾಧ್ಯಕ್ಷರಾಗಿ ರಾಜು ಕಲ್ಲೇನ್ನವರ, ಮನೋಜ್ ಹಿತ್ತಲಮನಿ, ಸಂತೋಷ್ ಕಾಂಬಳೆ, ಕಾರ್ಯದರ್ಶಿಗಳಾಗಿ ಆಕಾಶ ಹಲಗೇಕರ, ಆನಂದ ಕೋಲಕಾರ, ಸಲಹಾ ಸಮಿತಿ • ಬಸವರಾಜ ರಾಯಗೋಳ, ಸಿದ್ರಾಯಿ ಎಸ್. ಮೇತ್ರಿ, ದುರ್ಗೇಶ್ ಜಿ. ಮೇತ್ರಿ, ಯಲ್ಲಪ್ಪ ಕೋಲಕಾರ, ಮಹಾದೇವ ತಳವಾರ, ಮಹೇಶ್ ಕೋಲಕಾರ, ಮೋಹನ್ ಮಹಾದೇವ ಕಾಂಬಳೆ, ರಮೇಶ್ ಕೋಲಕಾರ @ ತುಡಯೇಕ್ಕರ್, ಮಿಲಿಂದ್ ಐಹೋಳೆ, ಪ್ರಶಾಂತ್ ಪೂಜೇರಿ, ಆಕಾಶ್ ಬೇವಿನಕಟ್ಟಿ, ಸಂತೋಷ್ ಹಲಗೇಕರ್, ಅಂಬಿ, ಸಂದೀಪ್ ಖಂಗಾಂವಕರ್, ದೀಪಕ್ ದಾಬಡೆ, ಜೀವನ್ ಕುರಾಣೆ, ರಾಜು ಗಾರಗೋಟಿ, ದಯಾನಂದ ಬಸ್ತವಾಡಕರ್,ಪ್ರಕಾಶ್ ಚಂಪಣ್ಣವರ್, ಧನಪಾಲ್ ಆರ್. ಅಗಸಿಮನಿ ಮತ್ತು • ಶ್ರೀನಿವಾಸ್ ತಳವಾರ, ಸುರೇಶ್ ರಿಜಕಣ್ಣವರ್, ಮೋಹನ್ ಎಂ. ಕಾಂಬಳೆ ಮತ್ತು ಬಸವರಾಜ ಅವರೊಳ್ಳಿ ಅವರನ್ನು ರ್ಯಾಲಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ವಿಶ್ವ ರತ್ನ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರ 135ನೇ ಜಯಂತ್ಯೋತ್ಸವವನ್ನು ಏಪ್ರೀಲ್ 11 ರಿಂದ ಸಂಪೂರ್ಣ ವರ್ಷ ಹಮ್ಮಿಕೊಳ್ಳಲಾಗಿದೆ. ಏಪ್ರೀಲ್ 11 ರಂದು ಮಹಾತ್ಮಾಫೂಲೆ ಜಯಂತಿಯೊಂದಿಗೆ ಬೃಹತ ಬೈಕ್ ರ್ಯಾಲಿ ಮೂಲಕ ಸಂವಿಧಾನ ಜಾಗೃತಿ, ಏಪ್ರೀಲ್ 13 ರಂದು ದೀಪೋತ್ಸವ, ಏಪ್ರೀಲ್ 14 ರಂದು ಜನ್ಮೋತ್ಸವ ಸೇರಿದಂತೆ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರರನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕ್ರೀಡೋತ್ಸವ, ದಲಿತೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ಪರಿಸಂವಾದ, ದಲಿತ ಸಾಹಿತ್ಯ ಸಮ್ಮೇಳನ, ಕೊನೆಯದಾಗಿ ಭೀಮಜಾತಾ ನಡೆಯಲಿದೆ.

ಮಹಾಡ್ ಚವದಾರ ತಳ ಚಳುವಳಿ ಮತ್ತು ಸಮತಾ ಸೈನಿಕ ದಳ ಸ್ಥಾಪನೆ ಶತಮಾನೋತ್ಸವವನ್ನು ಪೂರೈಸಿವೆ. ಮಾತಾ ರಮಾಯಿ ಅವರ 125ನೇ ಜಯಂತಿ ಆಚರಿಸಲಾಗುವುದು. ಮಹಾಮಂಡಳದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಎಲ್ಲ ಪಕ್ಷದ ಶಾಸಕರೊಂದಿಗೆ ಎಲ್ಲ ಸಮಾಜದವರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದಲಿತ ಮುಖಂಡ ಮಲ್ಲೇಶ ಚೌಗುಲೆ ತಿಳಿಸಿದರು.

ಸಮಿತಿಯ ನಿಯೋಗವು ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಆಚರಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದೆ

Tags:

error: Content is protected !!