BELAGAVI

ಸಾವಿನಲ್ಲೂ ಸಾರ್ಥಕತೆ: ವೈದ್ಯಕೀಯ ಸಂಶೋಧನೆಗೆ ದೇಹದಾನ ಮಾಡಿದ ವಸಂತ ವೆಲ್ಲಿಂಗ್

Share

ಬೆಳಗಾವಿಯ ಹಿರಿಯ ನಾಗರಿಕ ಹಾಗೂ ಹೆಸರಾಂತ ಛಾಯಾಗ್ರಾಹಕ ದಿವಂಗತ ಜಿ. ಜಿ. ವೆಲ್ಲಿಂಗ್ ಅವರ ಪುತ್ರರಾದ ಶ್ರೀ ವಸಂತ ವೆಲ್ಲಿಂಗ್ ಅವರು ತಮ್ಮ ಮರಣದ ನಂತರ ದೇಹದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಅಂತಿಮ ಇಚ್ಛೆಯಂತೆ ಕುಟುಂಬಸ್ಥರು ದೇಹವನ್ನು ಹಸ್ತಾಂತರಿಸುವ ಮೂಲಕ ವಿಶಿಷ್ಟ ಗೌರವ ಸಲ್ಲಿಸಿದ್ದಾರೆ.

ಬೆಳಗಾವಿಯ ನಾನಾವಾಡಿಯ ನಿವಾಸಿ 95 ವರ್ಷದ ವಸಂತ ಗಜನನ ವೆಲ್ಲಿಂಗ ಅವರು ಶನಿವಾರ ವಿಧಿವಶರಾದರು. ಜೀವನದುದ್ದಕ್ಕೂ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದ ಅವರು, ಸಾವಿನ ನಂತರವೂ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಹದಾನದ ಸಂಕಲ್ಪ ಮಾಡಿದ್ದರು. ಅದರಂತೆ, ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಅವರ ಪಾರ್ಥಿವ ಶರೀರವನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆ.ಎನ್. ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಯಿತು. ಈ ಮಹತ್ವದ ನಿರ್ಧಾರಕ್ಕಾಗಿ ಡಾ. ಮಹಾಂತೇಶ ರಾಮಣ್ಣವರ ಅವರು ವೆಲ್ಲಿಂಗ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಮೃತರ ಈ ತ್ಯಾಗವು ಭಾವಿ ವೈದ್ಯರ ಶಿಕ್ಷಣಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಶ್ಲಾಘಿಸಿದ್ದಾರೆ.

Tags:

error: Content is protected !!