ಅದ್ಯಾಕೋ ಏನೋ ಧಾರವಾಡ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ದಿನ ಹಿಟ್ ಆ್ಯಂಡ್ ರನ್ ಇಬ್ಬರು ಯುವಕರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಇಂದೆ ಮುಂದೆ ಸಾಗುತ್ತಿದ್ದ ಎರಡು ಲಾರಿಗಳು ಚಾಲಕರ ನಿಯಂತ್ರಣ ತಪ್ಪಿ ಈಗಷ್ಟೇ ಪಲ್ಟಿಯಾಗಿವೆ.

ಧಾರವಾಡ ಚಿಕ್ಕಮಲ್ಲಿಗವಾಡ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೆಲೆ ಕಳೆದ ದಿನ ತಡ ಸಂಜೆ ಹಿಂಟ್ ಆ್ಯಂಡ್ ರನ್ಗೆ ತಾಲೂಕಿನ ಲಕಮಾಪುರ ಯುವಕರಿಬ್ಬರು ಅಸುನೀಗಿದ ಘಟನೆ ಮಾಸುವ ಮುನ್ನವೇ, ಇಂದು ಅದೇ ರಾಷ್ಟ್ರ ಹೆದ್ದಾರಿಯ ಹಳಿಯಾಳ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕರ ನಿಂತ್ರಣ ತಪ್ಪಿ ಮತ್ತೆರಡು ಲಾರಿಗಳು ಪಲ್ಟಿಯಾಗಿವೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಎರಡು ಲಾರಿ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಳಗಾವಿಯಿಂದ ಬೆಂಗಳೂರು ಕಡೆಗೆ ಧಾರವಾಡ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಲಾರಿಗಳು ಹಿಂದೆ ಮುಂದೆ ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಒಂದು ಲಾರಿಯಲ್ಲಿ ಸಕ್ಕರೆ ಲೋಡ್ವಿದ್ದು, ಇನ್ನೊಂದು ಕಂಟೇನರ್ ವಾಹನವಾಗಿದೆ. ಹೆದ್ದಾರಿ ಕಾಮಗಾರಿ ನಿದಾಣವಾಗಿ ನಡೆಯುತ್ತಿರುವುದೇ ಈ ಅಒಘಾತಗಳಿಗೆ ಕಾರಣವೆಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಅಪಘಾತದಿಂದ ಕೆಲಕಾಲ ಸಂಚಾರ ಅಸ್ವಸ್ಥತೆ ಉಂಟಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಕ್ರೇನ್ ಬಳಸಿ ವಾಹನ ಮೇಲೆತ್ತಿ ತೆರವು ಮಾಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

